Advertisement

ಮುಂಬಯಿ ಶೇರು: ಸೆನ್ಸೆಕ್ಸ್‌, ನಿಫ್ಟಿ ಅಲ್ಪ ಗಳಿಕೆಗೆ ತೃಪ್ತ

04:33 PM Nov 10, 2017 | udayavani editorial |

ಮುಂಬಯಿ : ದಿನ ಪೂರ್ತಿ ಹಾವು ಏಣಿಯಾಟದಲ್ಲಿ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 63.63 ಅಂಕಗಳ ಅಲ್ಪ ಏರಿಕೆಯೊಂದಿಗೆ 33,134.56 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12.80 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,321.80 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ 1,480 ಶೇರುಗಳು ಹಿನ್ನಡೆಗೆ ಗುರಿಯಾದವು; 1,197 ಶೇರುಗಳ ಮುನ್ನಡೆ ಭಾಗ್ಯ ಕಂಡವು. 

ಎಸ್‌ಬಿಐ ಇಂದು ಶೇ.7ರ ನಷ್ಟಕ್ಕೆ ಗುರಿಯಾಯಿತು. 

ಇಂದಿನ ಟಾಪ್‌ ಗೇನರ್‌ಗಳು : ಲಾರ್ಸನ್‌, ಎಚ್‌ಯುಎಲ್‌, ಮಹಿಂದ್ರ ಆ್ಯಂಡ್‌ ಮಹೀಂದ್ರ, ಐಸಿಐಸಿಐ ಬ್ಯಾಂಕ್‌.

Advertisement

ಟಾಪ್‌ ಲೂಸರ್‌ಗಳು : ಅರಬಿಂದೋ ಫಾರ್ಮಾ, ಟಾಟಾ ಮೋಟರ್‌, ಎಚ್‌ಪಿಸಿಎಲ್‌, ಬಾಶ್‌, ಬಿಪಿಸಿಎಲ್‌.

Advertisement

Udayavani is now on Telegram. Click here to join our channel and stay updated with the latest news.

Next