Advertisement

ಎರಡನೇ ದಿನವೂ ಮುಗ್ಗರಿಸಿದ ಮುಂಬಯಿ ಶೇರು; 14 ಅಂಕ ನಷ್ಟ

04:55 PM Jun 21, 2017 | |

ಮುಂಬಯಿ : ನಿರಂತರ ಎರಡನೇ ದಿನವೂ ಮುಗ್ಗರಿಸಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 13.89 ಅಂಕಗಳ ನಷ್ಟದೊಂದಿಗೆ 31,283.64 ಅಂಕಗಳ ಮಟ್ಟದಲ್ಲಿ  ನಿರಾಶಾದಾಯಕವಾಗಿ ಕೊನೆಗೊಳಿಸಿದೆ. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19.90 ಅಂಕಗಳ ನಷ್ಟದೊಂದಿಗೆ 9,650.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಹಿಂದುಸ್ಥಾನ್‌ ಯುನಿಲಿವರ್‌, ಕೋಟಕ್‌ ಮಹೀಂದ್ರ, ಸನ್‌ ಫಾರ್ಮಾಸುÂಟಿಕಲ್‌, ವಿಪ್ರೋ ಮತ್ತು ಮಾರುತಿ ಸುಜುಕಿ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡವು.

ಇದಕ್ಕೆ ವ್ಯತಿರಿಕ್ತವಾಗಿ ಟಾಟಾ ಮೋಟರ್‌, ಓಎನ್‌ಜಿಸಿ, ಲೂಪಿನ್‌, ಅದಾನಿ ಪೋರ್ಟ್‌, ಟಿಸಿಎಸ್‌ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು. 

ಇಂದು ವಹಿವಾಟಿಗೆ ಒಳಪಟ್ಟ ಒಟ್ಟು ಶೇರುಗಳು 2,980; ಮುನ್ನಡೆ ಸಾಧಿಸಿದವುಗಳು 1,336, ಹಿನ್ನಡೆಗೆ ಗುರಿಯಾದವು 1,446; ಯಾವುದೇ ಬದಲಾವಣೆ ಕಾಣದವು 198 ಶೇರುಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next