ಮುಂಬಯಿ : ದಿನದ ವಹಿವಾಟಿನ ಉದ್ದಕ್ಕೂ ನಿರ್ದಿಷ್ಟ ವ್ಯಾಪ್ತಿಯೊಳಗೆ ಹೊಯ್ದಾಡಿದ ಮುಂಬಯಿ ಶೇರು ಇಂದು ಸೋಮವಾರದ ವಹಿವಾಟನ್ನು 17.10 ಅಂಕಗಳ ಅಲ್ಪಏರಿಕೆಗೆ ತೃಪ್ತಿ ಪಟ್ಟು 33,359.90 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಕೇವಲ 15.20 ಅಂಕಗಳ ಏರಿಕೆಗೆ ತೃಪ್ತಿ ಪಟ್ಟು ದಿನದ ವಹಿವಾಟನ್ನು 10,298.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,652 ಶೇರುಗಳು ಮುನ್ನಡೆ ಕಂಡವು; 1,025 ಶೇರುಗಳು ಹಿನ್ನಡೆಗೆ ಗುರಿಯಾದವು; 159 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಕೋಲ್ ಇಂಡಿಯಾ, ಒಎನ್‌ಜಿಸಿ, ಗೇಲ್ ಮತ್ತು ಟಾಟಾ ಪವರ್ ಟಾಪ್ ಗೇನರ್ ಎನಿಸಿಕೊಂಡವು; ಐಸಿಐಸಿಐ ಬ್ಯಾಂಕ್, ಡಿಆರ್‌ಎಲ್ ಮತ್ತು ಅಂಬುಜಾ ಸಿಮೆಂಟ್ಸ್ ಟಾಪ್ ಲೂಸರ್‌ಗಳಾಗಿದ್ದವು.
ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಮೂಡೀಸ್ ಭಾರತದ ಸೊವರೀನ್ ಕ್ರೆಡಿಟ್ ರೇಟಿಂಗನ್ನು ಹದಿನಾಲ್ಕು ವರ್ಷಗಳ ಬಳಿಕ ಒಂದು ಹಂತ ಮೇಲ್ಟಟ್ಟಕ್ಕೆ ಒಯ್ದದ್ದರ ಸತ್ಪರಿಣಾಮ ಶೇರು ಮಾರುಕಟ್ಟೆಯಲ್ಲಿ ಒಂದೇ ದಿನಕ್ಕೆ ಮುಗಿದು ಹೋದದ್ದು ವಿಶ್ಲೇಷಕರಿಗೆ ಅಚ್ಚರಿ ಉಂಟುಮಾಡಿತು.