ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಬೇಕಾಬಿಟ್ಟಿ ಮಾರಾಟ ನಡೆದುದನ್ನು ಅನುಸರಿಸಿ ಹೆಜ್ಜೆ ಹಾಕಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ 271.92 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 35,470.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಶುಕ್ರವಾರ 572.04 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿದ್ದ ಮುಂಬಯಿ ಶೇರು ಪೇಟೆಯಲ್ಲಿ ಇಂದು ರಿಯಲ್ಟಿ, ಕನ್ಸೂಮರ್ ಡ್ಯುರೇಬಲ್, ಮೆಟಲ್ ಮತ್ತು ಆಟೋ ಕೌಂಟರ್‌ಗಳು ಭಾರೀ ಮಾರಾಟವನ್ನು ಕಂಡವು. ಅಮೆರಿಕದಲ್ಲಿನ ಶಟ್ ಡೌನ್ ಅಸ್ಥಿರತೆಯ ಕಾರಣಕ್ಕೆ ಜಾಗತಿಕ ಶೇರುಗಳು ಮುಗ್ಗರಿಸಿದ್ದೇ ಮುಂಬಯಿ ಶೇರು ಪೇಟೆಯ ಕುಸಿತಕ್ಕೆ ಕಾರಣವಾಯಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 90.50 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,663.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಹೊಸ ವರ್ಷದ ವರೆಗೂ ಅಮೆರಿಕದಲ್ಲಿನ ಸರಕಾರಿ ಶಟ್ ಡೌನ್ ಮುಂದುವರಿಯುವ ಸಾಧ್ಯತೆ ಇರುವ ಕಾರಣ ಅಲ್ಲಿಯ ವರೆಗೂ ಭಾರತೀಯ ಶೇರು ಪೇಟೆಗಳು ಏಳಿಗೆ ಕಾಣುವ ಸಾಧ್ಯತೆಗಳು ಕಡಿಮೆ ಎಂದೇ ತಿಳಿಯಲಾಗಿದೆ. ಕ್ರಿಸ್‌ಮಸ್ ಪ್ರಯುಕ್ತ ನಾಳೆ ಮುಂಬಯಿ ಶೇರು ಪೇಟೆಗೆ ರಜೆ ಇದೆ.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,718 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 899 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,653 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 166 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.