ಮುಂಬಯಿ : ಏಶ್ಯನ್ ಮಾರಕಟ್ಟೆಗಳಲ್ಲಿನ ನಿರುತ್ಸಾಹ, ವಹಿವಾಟುದಾರರಿಂದ ಲಾಭ ನಗದೀಕರಣ ಹಾಗೂ ಕೆಲವೊಂದು ಕಂಪೆನಿಗಳ ತ್ತೈಮಾಸಿಕ ಫಲಿತಾಂಶ ಉತ್ತೇಜಕವಾಗಿಲ್ಲದಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 66 ಅಂಕಗಳ ಕುಸಿತವನ್ನು ಕಂಡಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22 ಅಂಕಗಳ ನಷ್ಟಕ್ಕೆ ಗುರಿಯಾಗಿ ತನ್ನ ದಾಖಲೆಯ ಮಟ್ಟದಿಂದ ಕೆಳಗಿಳಿಯಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 70.87 ಅಂಕಗಳ ನಷ್ಟದೊಂದಿಗೆ 33,195.29 ಅಂಕಗಳ ಮಟ್ಟದಲ್ಲೂ ನಿಫ್ಟಿ 5.75 ಅಂಕಗಳ ನಷ್ಟದೊಂದಿಗೆ 24,982.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಇನ್‌ಫೋಸಿಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಎಕ್ಸಿಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಅಂಬುಜಾ ಸಿಮೆಂಟ್ಸ್, ಇಂಡಸ್ ಇಂಡ್ ಬ್ಯಾಂಕ್, ಒಎನ್‌ಜಿಸಿ.
ಟಾಪ್ ಲೂಸರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಎಚ್‌ಪಿಸಿಎಲ್, ಎಸ್‌ಬಿಐ, ಕೋಲ್ ಇಂಡಿಯಾ, ಇನ್‌ಫೋಸಿಸ್.