Advertisement

ಲಾಭ ನಗದೀಕರಣ : ಮುಂಬಯಿ ಶೇರು 67 ಅಂಕ ಕುಸಿತ

11:01 AM Jun 25, 2018 | |

ಮುಂಬಯಿ : ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರ ತೀವ್ರಗೊಳ್ಳುವ ಭೀತಿಯಲ್ಲಿ ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯಲ್ಲಿ ಇಂದು ವಹಿವಾಟುದಾರರಿಂದ ಲಾಭ ನಗದೀಕರಣದ ಶೇರು ಮಾರಾಟ ನಡೆದ ಪ್ರಯುಕ್ತ ಸೆನೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 67 ಅಂಕಗಳ ನಷ್ಟದೊಂದಿಗೆ ಆರಂಭಿಸಿತು.

Advertisement

ಕಳೆದ ಶುಕ್ರವಾರದ ವಹಿವಾಟಿನಲ್ಲಿ 257.21 ಅಂಕಗಳ ಏರಿಕೆಯನ್ನು ದಾಖಲಿಸಿದ್ದ ಸೆನ್ಸೆಕ್ಸ್‌ ಇಂದು ಬೆಳಗ್ಗೆ 10.40ರ ಹೊತ್ತಿಗೆ 32.29 ಅಂಕಗಳ ನಷ್ಟದೊಂದಿಗೆ 35,657.31 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.40 ಅಂಕಗಳ ನಷ್ಟದೊಂದಿಗೆ 10,812.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಡಾಲರ್‌ ಎದರು ರೂಪಾಯಿ ದರ ಇಂದಿನ ಆರಂಭಿಕ ವಹಿವಾಟಿನಲ್ಲಿ 29 ಪೈಸೆಯಷ್ಟು ಕುಸಿದು 68.13 ರೂ. ಮಟ್ಟಕ್ಕೆ ಇಳಿದದ್ದು ಕೂಡ ಶೇರು ಮಾರುಕಟ್ಟೆಯ ಹಿನ್ನಡೆಗೆ ಕಾರಣವಾಯಿತು.

ಹೀರೋ ಮೋಟೋ ಕಾರ್ಪ್‌, ಟಾಟಾ ಮೋಟರ್‌, ಐಸಿಐಸಿಐ ಬ್ಯಾಂಕ್‌, ಐಟಿಸಿ, ಎಕ್ಸಿಸ್‌ ಬ್ಯಾಂಕ್‌, ಪವರ್‌ ಗ್ರಿಡ್‌, ಮಾರುತಿ ಸುಜುಕಿ, ಒಎನ್‌ಜಿಸಿ, ಎಚ್‌ ಡಿ ಎಫ್ ಸಿ, ಎನ್‌ಟಿಪಿಸಿ, ಆರ್‌ಐಎಲ್‌, ಎಸ್‌ ಬ್ಯಾಂಕ್‌, ಕೋಲ್‌ ಇಂಡಿಯಾ ಮತ್ತು ಎಸ್‌ಬಿಐ ಶೇರುಗಳು ಶೇ.13.9 ರಷ್ಟು ಇಳಿದವು. 

Advertisement

Udayavani is now on Telegram. Click here to join our channel and stay updated with the latest news.

Next