ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ತೇಜಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ವಹಿವಾಟನ್ನು 106.05 ಅಂಕಗಳ ಏರಿಕೆಯೊಂದಿಗೆ 30,570.97 ಅಂಕಗಳ ಮಟ್ಟದಲ್ಲಿ ಮುಕ್ತಾಯಗೊಳಿಸಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10.35 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು 9,438.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿಸಿ, ಭಾರ್ತಿ ಇನ್‌ಫ್ರಾಟೆಲ್ ಮತ್ತು ಲಾರ್ಸನ್ ಟಾಪ್ ಗೇನರ್ ಎನಿಸಿಕೊಂಡವು; ಎಸ್‌ಬಿಐ, ಲೂಪಿನ್ ಟಾಪ್ ಲೂಸರ್ ಎನಿಸಿಕೊಂಡವು.
ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ ಕೇವಲ 903 ಶೇರುಗಳು ಮುನ್ನಡೆ ಸಾಧಿಸಿದವು; 1,852 ಶೇರುಗಳು ಹಿನ್ನಡೆಗೆ ಗುರಿಯಾದವು; 161 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ನಿರಂತರ ಎರಡನೇ ದಿನವೂ ಮಿಡ್ ಕ್ಯಾಪ್ ಶೇರು ಸೂಚ್ಯಂಕ ಇಂದು ಕುಸಿಯಿತು. ಇದರೊಂದಿಗೆ ಪಿಎಸ್‌ಯು ಬ್ಯಾಂಕ್ ಹಾಗೂ ಇಂಧನ ಕ್ಷೇತ್ರದ ಶೇರುಗಳು ಕೂಡ ಕುಸಿದವು; ಎಫ್ಎಂಸಿಜಿ ಶೇರುಗಳು ಉತ್ತಮ ಮುನ್ನಡೆ ಕಂಡವು.