Advertisement

ಗಗನ ಮುಟ್ಟಿದ ಸೂಚ್ಯಂಕ: ಇತಿಹಾಸ ನಿರ್ಮಿಸಿದ BSE

10:30 PM Jul 14, 2023 | Team Udayavani |

ಮುಂಬೈ/ನವದೆಹಲಿ:  ಬರೋಬ್ಬರಿ 62,060.90…
ಬಾಂಬೆ ಷೇರು ಪೇಟೆಯಲ್ಲಿ ವಾರಾಂತ್ಯ ಶುಕ್ರವಾರ ನಿರ್ಮಾಣಗೊಂಡ ಸೂಚ್ಯಂಕದ ಇತಿಹಾಸ. ಜಗತ್ತಿನ ಪ್ರಮುಖ ಷೇರುಪೇಟೆಗಳಲ್ಲಿ ಅತ್ಯುತ್ತಮ ರೀತಿಯ ವಹಿವಾಟು ನಡೆಯುತ್ತಿದ್ದ ಪರಿಣಾಮ ಬಾಂಬೆ ಷೇರು ಪೇಟೆಯ ಮೇಲೂ ವ್ಯಕ್ತವಾಯಿತು. ದಿನದ ಅಂತ್ಯಕ್ಕೆ 502.01 ಪಾಯಿಂಟ್ಸ್‌ಗೆ ಸೂಚ್ಯಂಕ ಕೊನೆಗೊಂಡು 66,060.90ರಲ್ಲಿ ಮುಕ್ತಾಯಗೊಂಡಿತು. ಮಧ್ಯಂತರದಲ್ಲಿ 600.9 ಪಾಯಿಂಟ್ಸ್‌ ಏರಿಕೆಯಾಗಿ 66,159.79ರ ವರೆಗೆ ಏರಿಕೆಯಾಗಿತ್ತು. ಟಿಸಿಎಸ್‌ ಶೇ.5, ಟೆಕ್‌ ಮಹೀಂದ್ರಾ ಶೇ.4.51ರಷ್ಟು ಬೇಡಿಕೆ ಕಂಡವು.

Advertisement

ನಿಫ್ಟಿ ಸೂಚ್ಯಂಕ ದಾಖಲೆಯ 150.75 ಪಾಯಿಂಟ್ಸ್‌ ಏರಿಕೆಯಾಗಿ 19,564. 50ರಲ್ಲಿ ಮುಕ್ತಾಯವಾಗಿದೆ. ಮಧ್ಯಂತರದಲ್ಲಿ ಕೂಡ 181.6 ಪಾಯಿಂಟ್ಸ್‌ ವರೆಗೆ ಜಿಗಿದು, 19, 595.35ರ ವರೆಗೆ ತಲುಪಿತ್ತು.

ಅಮೆರಿಕದಲ್ಲಿ ಹಣದುಬ್ಬರ ಪ್ರಮಾಣ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಎಸ್‌ಇ ಸೇರಿದಂತೆ ಜಗತ್ತಿನ ಪ್ರಮುಖ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆದಿತ್ತು. ಬ್ರಿಟನ್‌ನ ಎಫ್ಟಿಎಸ್‌ಇ ಶೇ.0.2, ಫ್ರಾನ್ಸ್‌ನ ಸಿಎಸಿ 40 ಶೇ.0.3ರಷ್ಟು ತೇಜಿಯ ವಹಿವಾಟು ಕಂಡುಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾದದ್ದೂ ಸೂಚ್ಯಂಕ ಏರಿಕೆಯಾಗಲು ಕಾರಣ.

8 ಪೈಸೆ ಕುಸಿತ:
ಅಮೆರಿಕದ ಡಾಲರ್‌ ಎದುರು ರೂಪಾಯಿ 8 ಪೈಸೆ ಕುಸಿತಕಂಡು, 82.16 ರೂ.ಗಳಿಗೆ ಮುಕ್ತಾಯವಾಗಿದೆ.

ಎಂಟು ವರ್ಷ ಕನಿಷ್ಠಕ್ಕೆ ಸಗಟು ಹಣದುಬ್ಬರ
ಸಗಟು ಮಾರಾಟ ದರ ಆಧಾರಿತ ಹಣದುಬ್ಬರ (ಹೋಲ್‌ಸೇಲ್‌ ಇನ್‌ಫ್ಲೇಷನ್‌) ಜೂನ್‌ನಲ್ಲಿ ಮೈನಸ್‌ 4.12%ಕ್ಕೆ ಇಳಿಕೆಯಾಗಿದೆ. ಸತತ ಮೂರನೇ ಬಾರಿಗೆ ಇಂಥ ಬೆಳವಣಿಗೆ ಉಂಟಾಗುತ್ತಿದೆ. ಮತ್ತೂಂದು ಪ್ರಧಾನ ಅಂಶವೆಂದರೆ ಹಣದುಬ್ಬರ ಪ್ರಮಾಣ ಎಂಟು ವರ್ಷಗಳ ಕನಿಷ್ಠಕ್ಕೆ ಇಳಿಕೆಯಾಗಿದೆ. ಮೇನಲ್ಲಿ ಅದು ಮೈನಸ್‌ 3.48%ಕ್ಕೆ ಇಳಿದಿತ್ತು. 2022 ಜೂನ್‌ನಲ್ಲಿ ಶೇ.16.23 ಆಗಿತ್ತು. 2015ರ ಅಕ್ಟೋಬರ್‌ನಲ್ಲಿ ಮೈನಸ್‌ 4.76% ಹಣದುಬ್ಬರ ಇತ್ತು. ಆದರೆ, ಕಳೆದ ತಿಂಗಳು ಚಿಲ್ಲರೆ ಮಾರುಕಟ್ಟೆ ಆಧಾರಿತ ಹಣದುಬ್ಬರ ಮೇನಲ್ಲಿ ಶೇ.4.3 ಇದ್ದದ್ದು ಶೇ.4.8ಕ್ಕೆ ಏರಿಕೆಯಾಗಿತ್ತು.

Advertisement

ಬಿಎಸ್‌ಇ
66,060.90- ದಿನದ ಮುಕ್ತಾಯ
502.01- ದಿನದ ಏರಿಕೆ
66,159.79- ಮಧ್ಯಂತರದ ಏರಿಕೆ

ನಿಫ್ಟಿ
19,564. 50- ದಿನದ ಮುಕ್ತಾಯ
150.75- ದಿನದ ಏರಿಕೆ
19, 595.35- ಮಧ್ಯಂತರದಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next