ಮುಂಬಯಿ : ಬಜೆಟ್ ನಿರಾಶೆಯಿಂದ ಇನ್ನೂ ಮೇಲೇಳದ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಶೇರುಗಳ ಮಾರಣ ಹೋಮ ಇಂದು ಸೋಮವಾರವೂ ಮುಂದುವರಿದಿದೆ.
ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 546 ಅಂಕಗಳ ನಷಕ್ಕೆ ಗುರಿಯಾಗಿ 35,000 ಅಂಕಗಳ ಪ್ರಾಬಲ್ಯದ ಮಟ್ಟದಿಂದ ಕೆಳಗೆ ಜಾರಿತು.
ಬೆಳಗ್ಗೆ 10.39ರ ಹೊತ್ತಿಗೆ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ಕಂಡ ಸೆನ್ಸೆಕ್ಸ್ 338.50 ಅಂಕಗಳ ನಷ್ಟದೊಂದಿಗೆ 34,728.25 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 106.90 ಅಂಕಗಳ ನಷ್ಟದೊಂದಿಗೆ 10,653.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಎಚ್ ಡಿ ಎಫ್ ಸಿ, ಮಾರುತಿ ಸುಜುಕಿ , ಇನ್‌ಫೋಸಿಸ್ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಭಾತಿರ ಏರ್‌ಟೆಲ್, ಎಚ್‌ಪಿಸಿಎಲ್, ಟಾಟಾ ಮೋಟರ್, ಪವರ್ ಗ್ರಿಡ್ ಮೂಡಿ ಬಂದವು. ಟಾಪ್ ಲೂಸರ್‌ಗಳಾಗಿ ವೇದಾಂತ, ಎಚ್ ಡಿ ಎಫ್ ಸಿ, ಎಸ್ ಬ್ಯಾಂಕ್, ಲಾರ್ಸನ್, ಎಚ್‌ಯುಎಲ್ ಶೇರುಗಳು ಹಿನ್ನಡೆಗೆ ಗುರಿಯಾದವು.