Advertisement

ಅಮೆರಿಕ-ಚೀನ ಸುಂಕ ಸಮರಕ್ಕೆ ತಾತ್ಕಾಲಿಕ ತಡೆ: Sensex 200 ಅಂಕ ಜಂಪ್‌

10:48 AM Dec 03, 2018 | |

ಮುಂಬಯಿ : ಮುಂದಿನ ಮೂರು ತಿಂಗಳ ಮಟ್ಟಿಗೆ ಚೀನದಿಂದ ಆಮದಾಗುವ ವಸ್ತುಗಳ ಮೇಲೆ ತಾನು ವಿಪರೀತ ಸುಂಕ ಹೇರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌  ಜಿ-20 ಶೃಂಗದಲ್ಲಿ ಹೇಳಿರುವುದನ್ನು ಅನುಸರಿಸಿ ಏಶ್ಯನ್‌ ಶೇರು ಪೇಟೆಗಳಲ್ಲಿ ತೇಜಿ ಮೂಡಿಬಂದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಜಿಗಿತ ದಾಖಲಿಸಿತು.

Advertisement

ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್‌ 180.67 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,374.97 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44.70 ಅಂಕಗಳ ಏರಿಕೆಯನ್ನು ದಾಖಲಿಸಿ 10,921.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ  50 ಪೈಸೆಗಳ ಕುಸಿತವನ್ನು 70.08 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಮೆಟಲ್‌, ರಿಯಲ್ಟಿ, ಎಫ್ಎಂಸಿಜಿ ರಂಗದ ಶೇರುಗಳು ವಿಜೃಂಭಿಸಿದವು. ಟಾಪ್‌ ಗೇನರ್‌ಗಳಾದ ವೇದಾಂತ, ಟಾಟಾ ಸ್ಟೀಲ್‌, ಕೋಲ್‌ ಇಂಡಿಯಾ, ಎಚ್‌ಯುಎಲ್‌, ಇನ್ಫೋಸಿಸ್‌, ಎಚ್‌ ಡಿ ಎಫ್ ಸಿ, ಐಟಿಸಿ ಮತ್ತು  ಎಚ್‌ ಡಿ ಎಫ್ ಸಿ ಬ್ಯಾಂಕ್‌ ಶೇರುಗಳು ಶೇ.3ರಷ್ಟು ಏರಿದವು. 

Advertisement

Udayavani is now on Telegram. Click here to join our channel and stay updated with the latest news.

Next