ಮುಂಬಯಿ : ಅಮೆರಿಕ – ಚೀನ ನಡುವಿನ ವಾಣಿಜ್ಯ ಸುಂಕ ಸಮರ ಸೌಹಾರ್ದಯುತವಾಗಿ ಅಂತ್ಯವಾದೀತು ಎಂಬ ಹಾರೈಕೆಯ ನಡುವೆ ಜಾಗತಿಕ ಶೇರು ಪೇಟೆಗಳಲ್ಲಿ ಧನಾತ್ಮಕ ಸನ್ನಿವೇಶ ನೆಲೆಗೊಂಡದ್ದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ, ನಿರಂತರ ಮೂರನೇ ದಿನದ ಏರಿಕೆಯ ರೂಪದಲ್ಲಿ, ಸುಮಾರು 200 ಅಂಕಗಳ ಜಿಗಿತವನ್ನು ಕಂಡಿತು.
ಬೆಳಗ್ಗೆ 10.40ರ ಸುಮಾರಿಗೆ ಸೆನ್ಸೆಕ್ಸ್ 184.34 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,697.48 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 40.10 ಅಂಕಗಳ ಮುನ್ನಡೆಯೊದಿಗೆ 10,725.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ 10 ಪೈಸೆಯ ಕುಸಿತವನ್ನು ಕಂಡು 70.89 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಬೆಳಗ್ಗಿನ ವಹಿವಾಟಿಲ್ಲಿ ಎಸ್ ಬ್ಯಾಂಕ್, ಇನ್‌ಫೋಸಿಸ್, ಸನ್ ಫಾರ್ಮಾ, ಟಾಟಾಸ್ಟೀಲ್, ರಿಲಯನ್ಸ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಝೀ ಎಂಟರ್‌ಟೇನ್‌ಮೆಂಟ್, ಇನ್‌ಫೋಸಿಸ್,… ಟಿಸಿಎಸ್. ಹೀರೋ ಮೋಟೋ ಕಾರ್ಪ್, ಇಂಡಸ್ ಇಂಡ್ ಬ್ಯಾಂಕ್; ಟಾಪ್ ಲೂಸರ್‌ಗಳು : ಎಸ್ ಬ್ಯಾಂಕ್, ಭಾರ್ತಿ ಇನ್‌ಫ್ರಾಟೆಲ್, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್.