Advertisement

ಮುಂಬಯಿ ಶೇರು ಪೇಟೆ: 232 ಅಂಕಗಳ ಜಿಗಿತ, ನಿಫ್ಟಿ 10,677

06:11 AM Feb 20, 2019 | |

ಮುಂಬಯಿ : ಕಳೆದ 9 ದಿನಗಳಿಂದ ಸೋಲಿನ ಹಾದಿಯಲ್ಲಿ ಸಾಗಿ ಬಂದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ  250ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು. 

Advertisement

ಬೆಳಗ್ಗೆ 11.40ರ ಸುಮಾರಿಗೆ ಸೆನ್ಸೆಕ್ಸ್‌ 232.50 ಅಂಕಗಳ ಮುನ್ನಡೆಯೊಂದಿಗೆ 35,585.11 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 72.90 ಅಂಕಗಳ ಮುನ್ನಡೆಯೊಂದಿಗೆ 10,677.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಎಸ್‌ ಬ್ಯಾಂಕ್‌, ಟಿಸಿಎಸ್‌, ರಿಲಯನ್ಸ್‌, ಟಾಟಾ ಸ್ಟೀಲ್‌, ಎಚ್‌ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು; ಟಾಪ್‌ ಗೇನರ್‌ಗಳು : ವೇದಾಂತ, ಟಾಟಾ ಸ್ಟೀಲ್‌, ಇಂಡಿಯಾಬುಲ್ಸ್‌ ಹೌಸಿಂಗ್‌, ಅದಾನಿ ಪೋರ್ಟ್‌, ಬಿಪಿಸಿಎಲ್‌; ಟಾಪ್‌ ಲೂಸರ್‌ಗಳು : ಭಾರ್ತಿ ಇನ್‌ಫ್ರಾಟೆಲ್‌, ಬಜಾಜ್‌ ಆಟೋ, ಐಟಿಸಿ, ಹೀರೋ ಮೋಟೋ ಕಾರ್ಪ್‌, ಮಹೀಂದ್ರ. 

ಡಾಲರ್‌ ಎದುರು ರೂಪಾಯಿ ಇಂದು 3 ಪೈಸೆಯ ಮುನ್ನಡೆಯನ್ನು ಕಂಡು 71.31 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next