Advertisement

ನಿರಂತರ ಮೂರನೇ ದಿನ ಏರಿಕೆ: ಮುಂಬಯಿ ಶೇರು 130 ಅಂಕ ಜಿಗಿತ

11:54 AM Jan 08, 2019 | |

ಮುಂಬಯಿ : ನಿರಂತರ ಮೂರನೇ ದಿನವಾಗಿ ಇಂದು ಮಂಗಳವಾರ ಏರುಗತಿಯನ್ನು ಕಂಡುಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 130 ಅಂಕಗಳ ಮುನ್ನಡೆಯೊಂದಿಗೆ 35,980.93 ಅಂಕಗಳ ಮಟ್ಟಕೆಕ ಏರುವುದರೊಂದಿಗೆ ದಿನದ ವಹಿವಾಟನ್ನು ಕೊನೆಗೊಳಿಸಿತು.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ  30.35 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,802.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದಿನ ವಹಿವಾಟಿನಲ್ಲಿ ಸನ್‌ ಫಾರ್ಮಾ ಶೇ.3.98ರ ಏರಿಕೆಯನ್ನು ಕಂಡರೆ ಐಸಿಐಸಿಐ ಬ್ಯಾಂಕ್‌ ಶೇ.3.6ರ ಏರಿಕೆಯನ್ನು ದಾಖಲಿಸಿ ಟಾಪ್‌ ಗೇನರ್‌ ಎನಿಸಿಕೊಂಡವು. ಎಸ್‌ಬಿಐ, ಎಸ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಬಜಾಜ್‌ ಆಟೋ ಮತ್ತು ಇಂಡಸ್‌ ಇಂಡ್‌ ಶೇರುಗಳು ಶೇ.3.18ರ ಏರಿಕೆಯನ್ನು ದಾಖಲಿಸಿದವು. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು   ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ ಕಂಪೆನಿಗಳು ಮುನ್ನಡೆ ಸಾಧಿಸಿದವು;  ಕಂಪೆನಿಗಳು ಹಿನ್ನಡೆಗೆ ಗುರಿಯಾದವು;  ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next