ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಚರಿತ್ರೆಯಲ್ಲೇ ಮೊದಲ ಬಾರಿಗೆ 32,000 ಅಂಕಗಳ ಗಡಿ ದಾಟಿದ ಸಾಧನೆ ಮಾಡಿರುವ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 232.6 ಅಂಕಗಳ ಏರಿಕೆಯೊಂದಿಗೆ 32,037.38 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 75.6 ಅಂಕಗಳ ಮುನ್ನಡೆಯನ್ನು ಪಡೆದು ದಿನದ ವಹಿವಾಟನ್ನು 9,891.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಚಿಲ್ಲರೆ ಹಣದುಬ್ಬರ ದಾಖಲೆಯ ಕೆಳ ಮಟ್ಟವನ್ನು ತಲುಪಿರುವ ಕಾರಣ ಆರ್‌ಬಿಐ ಈಗಿನ್ನು ತನ್ನ ಬಡ್ಡಿ ದರಗಳನ್ನು ಇಳಿಸುವುದೆಂಬ ಲೆಕ್ಕಾಚಾರದಲ್ಲಿ ಇಂದು ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬಂತು.
ವ್ಯವಹಾರಕ್ಕೆ ಒಳಪಟ್ಟ 3,082 ಶೇರುಗಳ ಪೈಕಿ 1,402 ಶೇರುಗಳು ಮುನ್ನಡೆ ಸಾಧಿಸಿದರೆ 1,502 ಶೇರುಗಳು ಹಿನ್ನಡೆಗೆ ಗುರಿಯಾದವು; 178 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ಐಟಿಸಿ, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಲಾರ್ಸನ್, ಸನ್ ಫಾರ್ಮಾ. ಟಾಪ್ ಲೂಸರ್‌ಗಳು : ಒಎನ್‌ಜಿಸಿ, ಏಶ್ಯನ್ ಪೇಂಟ್ಸ್, ಟಾಟಾ ಮೋಟರ್, ಮಹೀಂದ್ರ, ಕೋಲ್ ಇಂಡಿಯಾ.