Advertisement

2017ಕ್ಕೆ ಭರ್ಜರಿ ವಿದಾಯ: ಮುಂಬಯಿ ಶೇರು 208 ಅಂಕ ಜಂಪ್‌

04:05 PM Dec 29, 2017 | |

ಮುಂಬಯಿ : 2017ರ ವಹಿವಾಟಿನ ಕೊನೇ ದಿನವಾದ ಇಂದು ಶುಕ್ರವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 208.80 ಅಂಕಗಳ ಜಿಗಿತದೊಂದಿಗೆ 34,056.83 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸುವುದರೊಂದಿಗೆ 2017ಕ್ಕೆ ಭರ್ಜರಿ ವಿದಾಯವನ್ನು ಕೋರಿತು.

Advertisement

ಸೆನ್ಸೆಕ್ಸ್‌ನಂತೆ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಕೂಡ 52.80 ಅಂಕಗಳ ಜಿಗಿತ ದಾಖಲಿಸಿ ದಿನದ ಹಾಗೂ 2017ರ ಕೊನೇ ವಹಿವಾಟನ್ನು 10,530.70 ಅಂಕಗಳ ಮಟ್ಟಕ್ಕೇರುವ ಮೂಲಕ ಹೊಸ ಆತ್ಮವಿಶ್ವಾಸದೊಂದಿಗೆ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ ಒಟ್ಟು 2,973 ಶೇರುಗಳು ವಹಿವಾಟಿಗೆ ಒಳಪಟ್ಟವು; 1,569 ಶೇರುಗಳು ಮುನ್ನಡೆ ಸಾಧಿಸಿದವು; 1,202 ಶೇರುಗಳು ಹಿನ್ನಡೆಗೆ ಗುರಿಯಾದವು; 202 ಶೇರುಗಳ ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ.

ಇಂದಿನ ಟಾಪ್‌ ಗೇನರ್‌ಗಳು : ಐಡಿಯಾ ಸೆಲ್ಯುಲರ್‌, ಟಾಟಾ ಮೋಟರ್‌, ಎಕ್ಸಿಸ್‌ ಬ್ಯಾಂಕ್‌, ಭಾರ್ತಿ ಇನ್‌ಫ್ರಾಟೆಲ್‌, ಟಿಸಿಎಸ್‌.

ಟಾಪ್‌ ಲೂಸರ್‌ಗಳು : ಗೇಲ್‌, ಬಿಪಿಸಿಎಲ್‌, ಎಚ್‌ಪಿಸಿಎಲ್‌, ವೇದಾಂತ, ಝೀ ಎಂಟರ್‌ಟೇನ್‌ಮೆಂಟ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next