ಮುಂಬಯಿ : ತಿಂಗಳ ವಾಯಿದೆ ವಹಿವಾಟು ಚುಕ್ತಾ ದಿನವಾದ ಗುರುವಾರಕ್ಕೆ ಮುನ್ನವೇ ಎಚ್ಚರಿಕೆಯ ನಡೆ ಇಟ್ಟಿರುವ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 125 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 125.94 ಅಂಕಗಳ ಮುನ್ನಡೆಯೊಂದಿಗೆ 30,491.19 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಪ್ಟಿ ಸೂಚ್ಯಂಕ 32 ಅಂಕಗಳ ಮುನ್ನಡೆಯೊಂದಿಗೆ 9,418.15 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಮೋಟರ್, ಎಸ್ ಬ್ಯಾಂಕ್, ಎಸ್ಬಿಐ, ಎಚ್ ಡಿ ಎಫ್ ಸಿ, ಅರಬಿಂದೋ ಫಾರ್ಮಾ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್ಗಳು : ಟಾಟಾ ಮೋಟರ್ (ಡಿ), ಟಾಟಾ ಮೋಟರ್, ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ , ಗ್ರಾಸಿಂ.
ಟಾಪ್ ಲೂಸರ್ಗಳು : ಎಚ್ಸಿಎಲ್ ಟೆಕ್, ಭಾರ್ತಿ ಇನ್ಫ್ರಾಟೆಲ್, ಐಡಿಯಾ ಸೆಲ್ಯುಲರ್, ಡಾ. ರೆಡ್ಡಿ ಮತ್ತು ಅರಬಿಂದೋ ಫಾರ್ಮಾ.