ಮುಂಬಯಿ : ನಿರಂತರ ಎರಡನೇ ದಿನವಾದ ಇಂದು ಕೂಡ ಲಾಭದ ಹಾದಿಯಲ್ಲಿ ಸಾಗಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 108 ಅಂಕಗಳ ಮುನ್ನಡೆಯನ್ನು ಸಾಧಿಸಿ 33,174 ಅಂಕಗಳ ಮಟ್ಟದಲ್ಲಿ ಇಂದು ಮಂಗಳವಾರದ ವಹಿವಾಟನ್ನು ಕೊನೆಗೊಳಿಸಿತು.
ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸಂಧಾನದ ಮಾತುಕತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶೇರು ಮಾರುಕಟ್ಟೆಗಳು ಧನಾತ್ಮಕವಾಗಿರುವುದೇ ಇಂದಿನ ಮುಂದುವರಿದ ತೇಜಿಗೆ ಕಾರಣವೆಂದು ತಿಳಿಯಲಾಗಿದೆ. ಸೆನ್ಸೆಕ್ಸ್ ನಿನ್ನೆ ಸೋಮವಾರದ ವಹಿವಾಟಿನಲ್ಲಿ 470 ಅಂಕಗಳ ಜಿಗಿತವನ್ನು ಸಾಧಿಸಿತ್ತು.
ಇಂದು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 53.50 ಅಂಕಗಳ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು 10,207.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಎಸ್‌ಬಿಐ, ಏಶ್ಯನ್ ಪೇಂಟ್, ಪವರ್ ಗ್ರಿಡ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಕೋಟಕ್ ಬ್ಯಾಕ್, ಎಚ್‌ಯುಎಲ್, ಮಾರುತಿ ಸುಜುಕಿ ಮತುತ ಟಿಸಿಎಸ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು.
ಇಂದು ಶೇರು ಪೇಟೆಯಲ್ಲಿ 2,807 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. 1,852 ಶೇರುಗಳು ಮುನ್ನಡೆ ಸಾಧಿಸಿದವುಸ 806 ಶೇರುಗಳು ಹಿನ್ನಡೆಗೆ ಗುರಿಯಾದವು; 149 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.