ಮುಂಬಯಿ : ನಿರಂತರ ಮೂರನೇ ದಿನವೂ ಮುಂಬಯಿ ಶೇರು ಕುಸಿತವನ್ನು ದಾಖಲಿಸಿದೆ. ಡಾಲರ್ ಎದುರು ರೂಪಾಯಿ ವಿನಿಮಯ ದರ ಶೇ.1ರಷ್ಟು ಕುಸಿದು 64.85ರ ಮಟ್ಟಕ್ಕೆ ಇಳಿದಿರುವುದು ಶೇರು ಪೇಟೆಯ ಉತ್ಸಾಹವನ್ನು ಕುಂದಿಸಿದೆ. ಫೆಬ್ರವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ ದಿನಾಂಕ ಸಮೀಪಿಸುತ್ತಿರುವುದು ಕೂಡ ವಹಿವಾಟುದಾರರ ಎಚ್ಚರಿಕೆಯ ನಡೆಗೆ ಕಾರಣವೆಂದು ತಿಳಿಯಲಾಗಿದೆ.
ಇಂದಿನ ವಹಿವಾಟಿನಲ್ಲಿ ಫೋರ್ಟೀಸ್ ಹೆಲ್ತ್ ಕೇರ್, ಭೂಷಣ್ ಸ್ಟೀಲ್, ಆಮ್‌ಟೆಕ್ ಆಟೋ, ಕಾಯಾ ಮತ್ತು ಜೆಎಸ್‌ಡಬ್ಲ್ಯು ಎನರ್ಜಿ ಶೇರುಗಳು ಶೇ.1ರಿಂದ ಶೇ.5ರಷ್ಟು ಕುಸಿದವು.
ದಿನದ ವಹಿವಾಟನ್ನು ಸೆನ್ಸೆಕ್ಸ್ 51.15 ಅಂಕಗಳ ನಷ್ಟದೊಂದಿಗೆ 33,723.51 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20 ಅಂಕಗಳ ನಷ್ಟದೊಂದಿಗೆ 10,358.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,401 ಶೇರುಗಳು ಹಿನ್ನಡೆಗೆ ಗುರಿಯಾದವು; 1,216 ಶೇರುಗಳು ಮುನ್ನಡೆ ಕಂಡವು.
k