ಮುಂಬಯಿ : ಬುಧವಾರ ನಡೆಯಲಿರುವ ಆರ್‌ಬಿಐ ನ ಎರಡು ದಿನಗಳ ಹಣಕಾಸ ಪರಾಮರ್ಶೆ ಸಭೆಯ ಫಲಿತಾಂಶವನ್ನು ಎದುರು ನೋಡುತ್ತಿರುವ ವಹಿವಾಟುದಾರರು ಹಾಗೂ ಹೂಡಿಕೆದಾರರು ಲಾಭ ನಗದೀಕರಣಕ್ಕೆ ಮುಂದಾದ ಕಾರಣ ಇಂದು ಮಂಗಳವಾರದ ವಹಿವಾಟನ್ನು 118.93 ಅಂಕಗಳ ನಷ್ಟದೊಂದಿಗೆ 31,190.56 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 37.95 ಅಂಕಗಳ ನಷ್ಟದೊಂದಿಗೆ 9,637.15 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನು ಕೊನೆಗೊಳಿಸಿತು.
ಈ ನಡುವೆ ಹವಾಮಾನ ಇಲಾಖೆಯು ಈ ಬಾರಿಯ ಮುಂಗಾರು ಮಳೆ ಕುರಿತ ತನ್ನ ಅಂದಾಜನ್ನು ಮೇಲ್ದರ್ಜೆಗೆ ಪರಿಷ್ಕರಿಸಿ ದೀರ್ಘಾವಧಿ ಸರಾಸರಿಯಾಗಿ ಶೇ.98ರಷ್ಟು ಈ ವರ್ಷ ಮಳೆಯಾಗುವುದೆಂದು ಹೇಳಿರುವುದನ್ನು ಶೇರು ಮಾರುಕಟ್ಟೆಯು ಸ್ವಾಗತಿಸಿದೆ.
ಇದೇ ವರ್ಷ ಎಪ್ರಿಲ್ ತಿಂಗಳ ವರದಿಯಲ್ಲಿ ಹವಾಮಾನ ಇಲಾಖೆಯು ಶೇ.96ರ ದೀರ್ಘಾವಧಿ ಸರಾಸರಿ ಮಳೆಯನ್ನು ಅಂದಾಜಿಸಿತ್ತು.
ಇಂದಿನ ವಹಿವಾಟಿನಲ್ಲಿ ಎಚ್‌ಸಿಎಲ್ ಟೆಕ್, ಟಿಸಿಎಸ್, ಇನ್‌ಫೋಸಿಸ್, ಟೆಕ್ ಮಹೀಂದ್ರ, ವಿಪ್ರೋ ಟಾಪ್ ಗೇನರ್ ಎನಿಸಿದವು. ಟಾಟಾ ಮೋಟರ್, ಎನ್‌ಟಿಪಿಸಿ, ಒಎನ್‌ಜಿಸಿ, ಎಸಿಸಿ ಟಾಪ್ ಲೂಸರ್ ಎನಿಸಿದವು.