Advertisement

ಎರಡನೇ ದಿನವೂ ತೇಜಿ: ಮುಂಬಯಿ ಶೇರು 284 ಅಂಕ ಜಿಗಿತ

04:37 PM Jun 07, 2018 | udayavani editorial |

ಮುಂಬಯಿ: ಆರ್‌ ಬಿ ಐ ಹಣಕಾಸು ನೀತಿಯನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಕಂಡು ಬಂದಿರುವ ತೇಜಿ ಇಂದು ಎರಡನೇ ದಿನವೂ ಮುಂದುವರಿದಿರುವ ಪರಿಣಾಮವಾಗಿ ಸೆನ್ಸೆಕ್ಸ್‌ ಇಂದು ಗುರುವಾರದ ವಹಿವಾಟನ್ನು 284 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು 35,463.08 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 83.70 ಅಂಕಗಳ ಜಿಗಿತವನ್ನು ಸಾಧಿಸಿ ದಿನದ ವಹಿವಾಟನ್ನು 10,768.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದಿನ ವಹಿವಾಟಿನಲ್ಲಿ ರಿಯಲ್ಟಿ, ಮೆಟಲ್‌, ಬ್ಯಾಂಕಿಂಗ್‌, ಆಟೋ ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಶೇರುಗಳು ಭರ್ಜರಿ ಖರೀದಿ ದಾಖಲಾಯಿತು. ಸಟ್ಟಾ ವಹಿವಾಟುದಾರರಿಂದ ಶಾರ್ಟ್‌ ಕವರಿಂಗ್‌ ನಡೆದಿರುವುದು ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ವ್ಯಾಪಕ ಶೇರು ಖರೀದಿಯಲ್ಲಿ ತೊಡಗಿಕೊಂಡದ್ದು ಇಂದಿನ ತೇಜಿಗೆ ಕಾರಣವಾಯಿತು.

ನಿನ್ನೆ ಬುಧವಾರ ದೇಶೀಯ ಹೂಡಿಕೆದಾರ ಸಂಸ್ಥೆಗಳು 712.31 ಕೋಟಿ ರೂ. ಶೇರುಗಳನ್ನು ಖರೀದಿಸಿದರೆ ವಿದೇಶಿ ಹೂಡಿಕೆದಾರರು 81.40 ಕೋಟಿ ರೂ.ಶೇರುಗಳನ್ನು ಮಾರಿದರು.

Advertisement

Udayavani is now on Telegram. Click here to join our channel and stay updated with the latest news.

Next