Advertisement

7 ತಿಂಗಳ ಹೊಸ ಕನಿಷ್ಠ ಮಟ್ಟಕ್ಕೆ ಕುಸಿದ ಸೆನ್ಸೆಕ್ಸ್‌ : 341 ಅಂಕ ನಷ್ಟ

04:27 PM Oct 26, 2018 | |

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು ಹೊಸ ಏಳು ತಿಂಗಳ ಕನಿಷ್ಠ ಮಟ್ಟವಾಗಿ, 341ಅಂಕಗಳ ನಷ್ಟದೊಂದಿಗೆ 33,349.31 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. ಸೆನ್ಸೆಕ್ಸ್‌ ನ ಇಂದಿನ ಈ ಮಟ್ಟವು ಈ ವರ್ಷ ಎಪ್ರಿಲ್‌ 5ರ ಬಳಿಕದಲ್ಲಿ ದಾಖಲಾಗಿರುವ ಕನಿಷ್ಠ ಮಟ್ಟವಾಗಿದೆ. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 94.90 ಅಂಕಗಳ ನಷ್ಟದೊಂದಿಗೆ 10,030 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು. ನಿಫ್ಟಿ ಯ ಈ ಮಟ್ಟ ಈ ವರ್ಷ ಮಾರ್ಚ್‌ 26ರ ಬಳಿಕ (10,130.65) ದಾಖಲಾಗಿರುವ ಕನಿಷ್ಠ ಮಟ್ಟವಾಗಿದೆ. 

ಜಾಗತಿಕ ಶೇರು ಪೇಟೆಗಳಲ್ಲಿನ ಹಿನ್ನಡೆ, ಡಾಲರ್‌ ಎದುರು ರೂಪಾಯಿ ಕುಸಿತ, ವಿದೇಶಿ ಬಂಡವಾಳದ ನಿರಂತರ ಹೊರ ಹರಿವು – ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆ ಇಂದು ಕುಸಿತಕ್ಕೆ ಗುರಿಯಾಯಿತು.

ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ನಿರಂತರ ಎರಡನೇ ವಾರಾಂತ್ಯದ ನಷ್ಟವನ್ನು ದಾಖಲಿಸಿವೆ; ಸೆನ್ಸೆಕ್ಸ್‌ ಈ ವಾರ 966.32 ಅಂಕಗಳ ನಷ್ಟಕ್ಕೆ ಗುರಿಯಾಗಿದೆ (ಶೇ.3); ನಿಫ್ಟಿ ವಾರದ ನಷ್ಟಕ 273.55 ಅಥವಾ ಶೇ.2.7.

ಡಾಲರ್‌ ಎದುರು ರೂಪಾಯಿ ಇಂದು ವಹಿವಾಟಿನ ನಡುವೆ 73.45 ರೂ. ಮಟ್ಟಕ್ಕೆ ಕುಸಿಯಿತು. 

Advertisement

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,702 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,105 ಶೇರುಗಳು ಮುನ್ನಡೆ ಸಾಧಿಸಿದವು; 1,448 ಶೇರುಗಳು ಹಿನ್ನಡೆಗೆ ಗುರಿಯಾದವು; 149 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next