ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ಕಂಡು ಬಂದ ಮಿಶ್ರ ಪ್ರತಿಕ್ರಿಯೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 100 ಅಂಕಗಳ ನಷ್ಟಕ್ಕೆ ಗುರಿಯಾಗುವ ಮೂಲಕ ತನ್ನ ನಾಲ್ಕು ದಿನಗಳ ನಿರಂತರ ಏರುಗತಿಯನ್ನು ಕಳೆದುಕೊಂಡಿತು.ಬ್ಯಾಂಕಿಂಗ್, ತೈಲ, ಅನಿಲ, ಹಣಕಾಸು, ಆಟೋ ಮುಂತಾಗಿ ಮುಂಚೂಣಿ ರಂಗದ ಶೇರುಗಳು ಭರಾಟೆಯ ಮಾರಾಟವನ್ನು ಕಂಡ ಪ್ರಯುಕ್ತ ಸೆನ್ಸೆಕ್ಸ್ ಹಿನ್ನಡೆಗೆ ಗುರಿಯಾಯಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 58.67 ಅಂಕಗಳ ನಷ್ಟದೊಂದಿಗೆ 33,821.58 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 34.90 ಅಂಕಗಳ ನಷ್ಟದೊಂದಿಗೆ 10,367.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವೇದಾಂತ, ಎಕ್ಸಿಸ್ ಬ್ಯಾಂಕ್, ಹಿಂಡಾಲ್ಕೊ, ಟಾಟಾ ಸ್ಟೀಲ್ ಮತ್ತು ಬಿಪಿಸಿಎಲ್ ಕಂಪೆನಿಯ ಶೇರುಗಳು ಅತ್ಯಂತ್ರ ಸಕ್ರಿಯವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ವಿನಿಮಯ ದರ 12 ಪೈಸೆ ನಷ್ಟಕ್ಕೆ ಗುರಿಯಾಗಿ 65.11 ರೂ. ಮಟ್ಟದಲ್ಲಿ ದಾಖಲಾಯಿತು.
ಒಎನ್‌ಜಿಸಿ, ಸನ್ ಫಾರ್ಮಾ, ಟಿಸಿಎಸ್, ಇನ್‌ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಟಾಪ್ ಗೇನರ್‌ಗಳಾಗಿದ್ದರೆ ಎಸ್‌ಬಿಐ, ಅದಾನಿ ಪೋರ್ಟ್, ಐಸಿಐಸಿಐ ಬ್ಯಾಂಕ್, ಎಸ್ ಬ್ಯಾಂಕ್, ಏಶ್ಯನ್ ಪೇಂಟ್ಸ್ ಶೇ.2ರಷ್ಟು ಕುಸಿದವು.