ಮುಂಬಯಿ : ಮಾರ್ಚ್ ತಿಂಗಳ ವಾಯಿದೆ ವಹಿವಾಟು ಸರಣಿಯನ್ನು ಅತ್ಯಂತ ಬಲಿಷ್ಠವಾಗಿ ಆರಂಭಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 322.65 ಅಂಕಗಳ ಭರ್ಜರಿ ಏರಿಕೆಯೊಂದಿಗೆ 34,142.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 108.30 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,491.00 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,894 ಶೇರುಗಳು ಮುನ್ನಡೆ ಸಾಧಿಸಿದವು; 828 ಶೇರುಗಳು ಹಿನ್ನಡೆಗೆ ಗುರಿಯಾದವು; 208 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಸನ್ ಫಾರ್ಮಾ, ಟಾಟಾ ಸ್ಟೀಲ್, ಎಸ್ ಬ್ಯಾಂಕ್, ಯುಪಿಎಲ್ ಶೇರುಗಳ ಧಾರಣೆ ಇಂದು ಗಮನಾರ್ಹವಾಗಿ ಸುಧಾರಿಸಿತು. ಇದೇ ವೇಲೆ ಏಶ್ಯನ್ ಪೇಂಟ್ಸ್, ಇನ್‌ಫೋಸಿಸ್, ಗೇಲ್ ಶೇರುಗಳು ಹಿನ್ನಡೆಗೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 17 ಪೈಸೆಯಷ್ಟು ಸುಧಾರಿಸಿದುದು ಶೇರು ಮಾರುಕಟ್ಟೆಗೆ ಹಿತಕಾರಿ ಎನಿಸಿತು.