ಮುಂಬಯಿ : ವಾರದ ಮೊದಲ ದಿನವಾದ ಇಂದಿನ ಸೋಮವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಷ್ಟದೊದಿಗೆ ಮುಕ್ತಾಯಗೊಳಿಸಿದೆ. ಆದರೆ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 10,050ಕ್ಕಿಂತ ಮೇಲ್ಮಟ್ಟದಲ್ಲಿ ಸೆಟೆದು ನಿಂತಿರುವುದು ವಿಶೇಷವಾಗಿದೆ.
ಇಂದಿನ ವಹಿವಾಟಿನಲ್ಲಿ ಎಲ್ ಆ್ಯಂಡ್ ಟಿ ಫಿನಾನ್ಸ್ ಹೋಲ್ಡಿಂಗ್, ಜೈಪ್ರಕಾಶ್ ಅಸೋಸಿಯೇಟ್ಸ್, ಶಾರದಾ ಎನರ್ಜಿ, ಅಪೋಲೋ ಟೈರ್, ಭೂಷಣ್ ಸ್ಟೀಲ್, ವೋಕ್‌ಹಾರ್ಟ್, ಸಿಂಟೆಕ್ಸ್, ಎರೋಸ್ ಇಂಟರ್‌ನ್ಯಾಶನಲ್, ಕ್ಯಾಡಿಲಾ ಹೆಲ್ತ್ ಕೇರ್ ಮತ್ತು ಟೊರೆಂಟ್ ಪವರ್ ಶೇರುಗಳು ಶೇ.10ರಷ್ಟು ಏರಿರುವುದು ಗಮನಾರ್ಹವಾಗಿದೆ.
ದಿನಾಂತ್ಯಕ್ಕೆ ಸೆನ್ಸೆಕ್ಸ್ 51.74 ಅಂಕಗಳ ನಷ್ಟದೊಂದಿಗೆ 32,273.67 ಅಂಕಗಳ ಮಟ್ಟದಲ್ಲೂ ನಿಫ್ಟಿ 9 ಅಂಕಗಳ ನಷ್ಟದೊಂದಿಗೆ 10,057.40 ಅಂಕಗಳ ಮಟ್ಟದಲ್ಲೂ ಸ್ಥಿತವಾಗಿದ್ದವು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,549 ಶೇರುಗಳು ಮುನ್ನಡೆದರೆ 1,070 ಶೇರುಗಳು ಹಿನ್ನಡೆಗೆ ಗುರಿಯಾದವು; 178 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಟಾ ಸ್ಟೀಲ್, ಎಸ್‌ಬಿಐ, ಇಂಡಿಯನ್ ಆಯಿಲ್ ಟಾಪ್ ಗೇನರ್ ಪಟ್ಟಿಯಲ್ಲಿ ವಿಜೃಂಭಿಸಿದವು; ಇನ್‌ಫೋಸಿಸ್, ಡಾ. ರೆಡ್ಡಿ, ಭಾರ್ತಿ ಇನ್‌ಫ್ರಾಟೆಲ್ ಮತ್ತು ಎನ್‌ಟಿಪಿಸಿ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.