Advertisement

2 ತಿಂಗಳ ಗರಿಷ್ಠ ಮಟ್ಟವನ್ನು ಮುಟ್ಟಿದ ಸೆನ್ಸೆಕ್ಸ್‌; 35 ಅಂಕ ಏರಿಕೆ

05:09 PM Apr 23, 2018 | |

ಮುಂಬಯಿ : ಸಾಕಷ್ಟು ಏರಿಳಿತಗಳನ್ನು ಕಂಡ ಇಂದು ಸೋಮವಾರದ ವಹಿವಾಟಿನಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಅಂತಿಮವಾಗಿ 35 ಅಂಕಗಳ ಏರಿಕೆಯನ್ನು ದಾಖಲಿಸಿ ಎರಡು ತಿಂಗಳ ಗರಿಷ್ಠವಾಗಿ 34,450.77 ಅಂಕಗಳ ಮಟ್ಟಕ್ಕೆ ತಲುಪಿತು. ರಿಯಲ್ಟಿ, ಹೆಲ್ತ್‌ ಕೇರ್‌, ಕನ್ಸೂಮರ್‌ ಡ್ನೂರೇಬಲ್ಸ್‌ ಮತ್ತು ಐಟಿ  ವಲಯದ ಶೇರುಗಳು ಇಂದು ಉತ್ತಮ ಮುನ್ನಡೆ ಕಂಡವು. 

Advertisement

ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿನ ಮಿಶ್ರ ಪ್ರತಿಕ್ರಿಯೆ, ಕೆಳಮಟ್ಟದಲ್ಲಿ ಆರಂಭ ಕಂಡ ಯುರೋಪ್‌ ಶೇರು ಪೇಟೆ, ದುರ್ಬಲ ರೂಪಾಯಿ ಇವೇ ಮೊದಲಾದ ಕಾರಣಗಳು ಮುಂಬಯಿ ಶೇರು ಪೇಟೆಯ ಮೇಲೆ ಪ್ರಭಾವ ಬೀರಿದವು. 

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20.65 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,514.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,847 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟಡವು. ಈ ಪೈಕಿ 1,384 ಶೇರುಗಳು ಮುನ್ನಡೆ ಕಂಡವು; 1,304 ಶೇರುಗಳು ಹಿನ್ನಡೆಗೆ ಗುರಿಯಾದವು; 159 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next