Advertisement

ದಿನಾಂತ್ಯಕ್ಕೆ ಕಂಡು ಬಂದ ತೇಜಿ: ಮುಂಬಯಿ ಶೇರು 36 ಅಂಕ ಏರಿಕೆ

04:37 PM Jul 05, 2017 | |

ಮುಂಬಯಿ : ದೇಶೀಯ ಸಾಂಸ್ಥಿಕ ಹೂಡಿಕೆದಾರರು ಕೊನೇ ಕ್ಷಣದಲ್ಲಿ  ಗಮನಾರ್ಹ ಪ್ರಮಾಣದಲ್ಲಿ ಶೇರು ಖರೀದಿ ನಡೆಸಿದ್ದರ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 36 ಅಂಕಗಳ ಮುನ್ನಡೆಯೊಂದಿಗೆ 31,245.56 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 24.30 ಅಂಕಗಳ ಮುನ್ನಡೆಯನ್ನು ಪಡೆದು ದಿನದ ವಹಿವಾಟನ್ನು 9,637.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ರಿಲಯನ್ಸ್‌, ಲೂಪಿನ್‌, ಐಟಿಸಿ, ವೇದಾಂತ, ಎಸ್‌ಬಿಐ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.

ದಿನದ ಟಾಪ್‌ ಗೇನರ್‌ಗಳು : ಲೂಪಿನ್‌, ವೇದಾಂತ, ಮಹೀಂದ್ರ, ಒಎನ್‌ಜಿಸಿ, ಅಲ್ಟ್ರಾ ಟೆಕ್‌ ಸಿಮೆಂಟ್‌.

ಟಾಪ್‌ ಲೂಸರ್‌ಗಳು : ಐಟಿಸಿ, ಇನ್‌ಫೋಸಿಸ್‌, ವಿಪ್ರೋ, ಭಾರ್ತಿ ಏರ್‌ಟೆಲ್‌, ಎಚ್‌ ಡಿ ಎಫ್ ಸಿ. 

Advertisement
Advertisement

Udayavani is now on Telegram. Click here to join our channel and stay updated with the latest news.

Next