Advertisement

ಆರ್‌ಬಿಐ ಸಭೆಗೆ ಮುನ್ನ ಎಚ್ಚರಿಕೆಯ ನಡೆ: ಸೆನ್ಸೆಕ್ಸ್‌ 194 ಅಂಕ ನಷ್ಟ

05:45 AM Feb 18, 2019 | udayavani editorial |

ಮುಂಬಯಿ : ಆರ್‌ ಬಿ ಐ ಬೋರ್ಡ್‌ ಮೀಟಿಂಗ್‌ ಗೆ ಮುನ್ನವೇ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿದ ಕಾರಣ, ಐಟಿ,  ಆಟೋ ಮತ್ತು ಹಣಕಾಸು ರಂಗದ ಶೇರುಗಳಲ್ಲಿ ದೌರ್ಬಲ್ಯ ಕಂಡು ಬಂದುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 150ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.

Advertisement

ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್‌ 193.78 ಅಂಕಗಳ ನಷ್ಟದೊಂದಿಗೆ 35,615.17 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 60.40 ಅಂಕಗಳ ನಷ್ಟದೊಂದಿಗೆ 10,664.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.  ಎಸ್‌ ಬ್ಯಾಂಕ್‌, ರಿಲಯನ್ಸ್‌, ಡಾ.ರೆಡ್ಡಿ ಲ್ಯಾಬ್‌, ಐಟಿಸಿ, ಟಿಸಿಎಸ್‌ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು. 

ಇಂದಿನ ಆರಂಭಿಕ ವಹಿವಾಟನಲ್ಲಿ ಡಾಲರ್‌ ಎದುರು ರೂಪಾಯಿ 15 ಪೈಸೆಯ ಕುಸಿತವನ್ನು ಕಂಡು 71.38 ರೂ. ಮಟ್ಟದಲ್ಲಿ ವ್ಯಹಾರ ನಿರತವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next