ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವುದನ್ನು ಅನುಸರಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 11.10ರ ಸುಮಾರಿಗೆ ಸೆನ್ಸೆಕ್ಸ್ 147.67 ಅಂಕಗಳ ನಷ್ಟದೊಂದಿಗೆ 36,31.76 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 46.70 ಅಂಕಗಳ ನಷ್ಟದೊಂದಿಗೆ 10,847.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಕಳೆದ ಶುಕ್ರವಾರ ಸೆನ್ಸೆಕ್ಸ್ 212.74 ಅಂಕಗಳ ಮುನ್ನಡೆಯನ್ನು ಪಡೆದಿದ್ದರೆ ನಿಫ್ಟಿ 62.70 ಅಂಕಗಳ ಏರಿಕೆಯನು ದಾಖಲಿಸಿತ್ತು.
ಇಂದಿನ ಟಾಪ್ ಗೇನರ್‌ಗಳ ಪೈಕಿ ಒಎನ್‌ಜಿಸಿ, ಆರ್‌ಐಎಲ್, ಎಚ್‌ಸಿಎಲ್ ಟೆಕ್, ವೇದಾಂತ, ಎಚ್‌ಯುಎಲ್, ಕೋಲ್ ಇಂಡಿಯಾ, ಎಚ್ ಡಿ ಎಫ್ ಸಿ ಬ್ಯಾಂಕ್, ಟಿಸಿಎಸ್, ಇನ್‌ಫೋಸಿಸ್ ಶೇರುಗಳು ಶೇ.2.39ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದು 48 ಪೈಸೆಗಳ ಕುಸಿತವನ್ನು ಕಂಡು 71.73 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.