ಮುಂಬಯಿ : ಉತ್ತರ ಕೊರಿಯ ಸಮರ ಉದ್ವಿಗ್ನತೆಯ ಭಯದಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳು ಹಿನ್ನಡೆಗೆ ಗುರಿಯಾಗಿರುವಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 287.50 ಅಂಕಗಳ ನಷ್ಟಕ್ಕೆ ಗುರಿಯಾಗಿ 31,634.94 ಅಂಕಗಳ ಮಟ್ಟಕ್ಕೆ ಜಾರಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 100.90 ಅಂಕಗಳ ನಷ್ಟಕ್ಕೆ ಗುರಿಯಾಗಿ 9,863.50 ಅಂಕಗಳ ಮಟ್ಟಕ್ಕೆ ಜಾರಿತು.
ಬ್ಯಾಂಕ್ ನಿಫ್ಟಿ ಇಂದು ಆರಂಭಿಕ ವಹಿವಾಟಿನಲ್ಲಿ 287.35 ಅಂಕಗಳ ನಷ್ಟಕ್ಕೆ ಗುರಿಯಾಯಿತಾದರೆ ಐಟಿ ನಿಫ್ಟಿ 52.10 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಇಂದಿನ ಆರಂಭಿಕ ವಹಿವಾಟಿಲ್ಲಿ ಎಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಇನ್‌ಫೋಸಿಸ್, ರಿಲಯನ್ಸ್, ವೇದಾಂತ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಪವರ್ ಗ್ರಿಡ್, ಎಚ್‌ಯುಎಲ್, ಟಾಟಾ ಪವರ್, ಭಾರ್ತಿ ಇನ್‌ಫ್ರಾಟೆಲ, ಟಿಸಿಎಸ್ ಶೇರುಗಳು ಕಾಣಿಸಿಕೊಂಡರೆ ಟಾಪ್ ಲೂಸರ್‌ಗಳಾಗಿ ಅದಾನಿ ಪೋರ್ಟ್, ಟಾಟಾ ಸ್ಟೀಲ್, ಎಸಿಸಿ, ಅಂಬುಜಾ ಸಿಮೆಂಟ್ಸ್, ಅರಬಿಂದೋ ಪಾರ್ಮಾ ಶೇರುಗಳು ಹಿನ್ನಡೆಗೆ ಗುರಿಯಾದವು.