Advertisement

ಕಚ್ಚಾ ತೈಲ ಬೆಲೆ, ಹಣದುಬ್ಬರ ಕಳವಳ: ಸೆನ್ಸೆಕ್ಸ್‌ 228 ಅಂಕ ಕುಸಿತ

04:19 PM Dec 12, 2017 | |

ಮುಂಬಯಿ : ಒಂದೇ ಸಮನೆ ಏರುತ್ತಿರುವ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಹಾಗೂ ಅದರೊಂದಿಗೆ ತಳುಕು ಹಾಕಿಕೊಂಡಿರುವ ದೇಶದ ಹಣದುಬ್ಬರ ಏರಿಕೆಯ ಸಂಭಾವ್ಯತೆಯಿಂದ ವಿಚಲಿತವಾಗಿರುವ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ವಹಿವಾಟನ್ನು 228 ಅಂಕಗಳ ನಷ್ಟದೊಂದಿಗೆ 33,227.99 ಅಂಕಗಳ ಮಟ್ಟದಲ್ಲಿ ಕಳವಳಕಾರಿಯಾಗಿ ಸಮಾಪನಗೊಳಿಸಿದೆ.

Advertisement

ಇತರ ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಇಂದು ನಿಸ್ತೇಜ ವಾತಾವರಣ ಇರುವಂತೆಯೇ ದೇಶೀಯ ಹೂಡಿಕೆದಾರರು ಮತ್ತು ವಹಿವಾಟುದಾರರು ಇಂದು ಈಗಿನ್ನು ಬಿಡುಗಡೆಗೊಳ್ಳಲಿರುವ ದೇಶದ ಆರ್ಥಿಕತೆ ಕುರಿತ ಮ್ಯಾಕ್ರೋ ಡಾಟಾ ವನ್ನು ಎದುರು ನೋಡುತ್ತಿದ್ದಾರೆ.

ಇಂದು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 82.10 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು10,240.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ರಿಯಲ್ಟಿ ಕ್ಷೇತ್ರದ ಶೇರುಗಳ ಭರಾಟೆಯ ಮಾರಾಟವನ್ನು ಇಂದಿನ ವಹಿವಾಟು ಕಂಡಿರುವುದು ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next