Advertisement

ಜಾಗತಿಕ ಶೇರು ಪೇಟೆಗಳಲ್ಲಿ ಮಾರಾಟದ ಒತ್ತಡ:ಸೆನ್ಸೆಕ್ಸ್‌ 141 ಅಂಕ ನಷ್ಟ

10:30 AM Dec 18, 2018 | udayavani editorial |

ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ಕಂಡುಬಂದಿರುವ  ಭಾರೀ ಮಾರಾಟದ ಒತ್ತಡಕ್ಕೆ ಅನುಗುಣವಾಗಿ ಮುಂಬಯಿ ಶೇರು ಪೇಟೆ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 141 ಅಂಕಗಳ ನಷ್ಟವನ್ನು ಅನಭವಿಸಿತು. ಬ್ಯಾಂಕಿಂಗ್‌, ಐಟಿ, ರಿಯಲ್ಟಿ ಮತ್ತು ಎಫ್ಎಂಸಿಜಿ ಶೇರುಗಳು ಇಂದು ತೀವ್ರ ಮಾರಾಟವನ್ನು ಕಂಡವು. 

Advertisement

ಬೆಳಗ್ಗೆ  10.30ರ ಸುಮಾರಿಗೆ ಸೆನ್ಸೆಕ್ಸ್‌  200.07 ಅಂಕಗಳ ನಷ್ಟದೊಂದಿಗೆ  36,070 ಅಂಕಗಳ ಮಟ್ಟದಲ್ಲೂ  ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 59.20 ಅಂಕಗಳ ನಷ್ಟದೊಂದಿಗೆ 10,829.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗದ್ದವು.

ಡಾಲರ್‌ ಎದುರು ರೂಪಾಯಿ  ಇಂದಿನ ಆರಂಭಿಕ ವಹಿವಾಟಿನಲ್ಲಿ 37 ಪೈಸೆಗಳ ಚೇತರಿಕೆಯನ್ನು ಕಂಡು 71.19 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ಮುಂಬಯಿ ಶೇರು ಪೇಟೆಯಲ್ಲಿ ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ  ರಿಲಯನ್ಸ್‌, ಎಸ್‌ ಬ್ಯಾಂಕ್‌, ಇನ್‌ಫೋಸಿಸ್‌, ಹೀರೋ ಮೋಟೋ ಕಾರ್ಪ್‌, ಟಾಟಾ ಮೋಟರ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next