Advertisement

ಆಗಸ್ಟ್‌ ವಾಯಿದೆ-ವಹಿವಾಟು ಶುರು: ಮುಂಬಯಿ ಶೇರು 73 ಅಂಕ ಕುಸಿತ

05:33 PM Jul 28, 2017 | |

ಮುಂಬಯಿ : ಆಗಸ್ಟ್‌ ತಿಂಗಳ ವಾಯಿದೆ ವಹಿವಾಟನ್ನು ವಹಿವಾಟುದಾರರು ಎಚ್ಚರಿಕೆಯಿಂದ ಆರಂಭಿಸಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 73.42 ಅಂಕಗಳ ನಷ್ಟದೊಂದಿಗೆ 32,309.88 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 6.05 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,014.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಆದರೂ 10,000 ಅಂಕಗಳ ಮೇಲ್‌ವುಟ್ಟವನ್ನು ಕಾಯ್ದುಕೊಂಡ ತೃಪ್ತಿಯನ್ನು ಪಡೆಯಿತು. 

ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,265 ಶೇರುಗಳು ಮುನ್ನಡೆ ಸಾಧಿಸಿದವು; 1,374 ಶೇರುಗಳು ಹಿನ್ನಡೆಗೆ ಗುರಿಯಾದವು; 168 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.

ಎಚ್‌ ಡಿ ಎಫ್ ಸಿ, ಇನ್‌ಫೋಸಿಸ್‌, ಎಸ್‌ ಬ್ಯಾಂಕ್‌ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡರೆ ಡಾ. ರೆಡ್ಡಿ, ಲೂಪಿನ್‌ ಶೇರುಗಳು ಹಿನ್ನಡೆಗೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next