ಮುಂಬಯಿ : ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಮತ್ತು ಒತ್ತಡದ ಶೇರು ಮಾರಾಟಕ್ಕೆ ಗುರಿಯಾದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 47 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಡಾಲರ್ ಎದುರು ರೂಪಾಯಿ 12 ಪೈಸೆ ಕುಸಿದು 68.86 ರೂ. ಗೆ ಇಳಿದ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯಲ್ಲಿ ಕಳವಳ ಮೂಡಿತು.
ಹಾಗಿದ್ದರೂ ಬೆಳಗ್ಗೆ 10.40ರ ಹೊತ್ತಿಗೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 12.00 ಅಂಕಗಳ ಅಲ್ಪ ಸುಧಾರಣೆಯನ್ನು ಕಂಡು 35,657.40 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.10 ಅಂಕಗಳ ಏರಿಕೆಯನ್ನು ದಾಖಲಿಸಿ 10,773.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಇನ್‌ಫೋಸಿಸ್, ಎಸ್ ಬ್ಯಾಂಕ್, ಟಾಟಾ ಮೋಟರ್, ಟೈಟಾನ್ ಕಂಪೆನಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು :ಎಸ್ ಬ್ಯಾಂಕ್, ಅಲ್‌ಟ್ರಾ ಟೆಕ್ ಸಿಮೆಂಟ್, ಬಜಾಜ್ ಫಿನ್ ಸರ್ವ್, ಐಟಿಸಿ, ಡಾ. ರೆಡ್ಡಿ ; ಟಾಪ್ ಲೂಸರ್‌ಗಳು : ಟೈಟಾನ್ ಕಂಪೆನಿ, ಟಾಟಾ ಮೋಟರ್, ಇನ್‌ಫೋಸಿಸ್, ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್.