ಮುಂಬಯಿ : ಕರ್ನಾಟಕದಲ್ಲಿ ಹೊಸ ಸರಕಾರ ರಚಿಸುವಲ್ಲಿ ತಲೆದೋರಿರುವ ಅಸ್ಥಿರತೆ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರ ಹರಿವಿನಿಂದ ಉಂಟಾಗಿರುವ ಕಳವಳದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 245 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಕರ್ನಾಟಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ನಿನ್ನೆ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದ ಕಾರಣ ವಹಿವಾಟಿನ ನಡುವೆ ಮುಂಬಯಿ ಶೇರು 400ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಸಾಧಿಸಿ, ಅನಂತರ ದಿನದ ವಹಿವಾಟು ಮುಗಿಯುತ್ತಲೇ ನಷ್ಟಕ್ಕೆ ಗುರಿಯಾಗಿತ್ತು.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 234.21 ಅಂಕಗಳ ನಷ್ಟದೊಂದಿಗೆ 35,309.73 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 83.40 ಅಂಕಗಳ ನಷ್ಟದೊಂದಿಗೆ 10,718.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ರಿಲಯನ್ಸ್, ಟಾಟಾ ಮೋಟರ್ ಶೇರುಗಳು ಇಂದು ಬೆಳಗ್ಗೆ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಲೂಪಿನ್, ವಿಪ್ರೋ, ಟಿಸಿಎಸ್, ಟೈಟಾನ್ ಕಂಪೆನಿ, ಟೆಕ್ ಮಹೀಂದ್ರ; ಟಾಪ್ ಲೂಸರ್‌ಗಳು : ಸಿಪ್ಲಾ, ಐಸಿಐಸಿಐ ಬ್ಯಾಂಕ್, ಎಚ್‌ಪಿಸಿಎಲ್.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು ಸೆಟೆದು ನಿಂತು 27 ಪೈಸೆಯ ಚೇತರಿಕೆಯನ್ನು ದಾಖಲಿಸಿ 67.80 ರೂ. ಮಟ್ಟದಲ್ಲಿ ಸ್ಥಿತವಾಯಿತು.