Advertisement

ಏರಿಳಿತ ಕಂಡು ದಿನಾಂತ್ಯಕ್ಕೆ 19 ಅಂಕ ಕುಸಿದ ಮುಂಬಯಿ ಶೇರು

04:48 PM Jun 16, 2017 | |

ಮುಂಬಯಿ : ದಿನದ ವಹಿವಾಟಿನ ಉದ್ದಕ್ಕೂ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ದಿನಾಂತ್ಯದ ವೇಳೆಗೆ 19.33 ಅಂಕಗಳ ನಷ್ಟವನ್ನು ದಾಖಲಿಸಿ 31,056.40 ಅಂಕಗಳ ಮಟ್ಟಕ್ಕೆ ಇಳಿಯಿತು. 

Advertisement

ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,588.05 ಅಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್‌, ಕೋಟಕ್‌ ಮಹೀಂದ್ರ, ಅಲ್‌ಟ್ರಾ ಟೆಕ್‌ ಸಿನೆಂಟ, ಟಾಟಾ ಮೋಟರ್‌, ಎಸಿಸಿ ಶೇರುಗಳು ಟಾಪ್‌ ಗೇನರ್‌ ಎನಿಸಿಕೊಂಡವು.

ಲೂಪಿನ್‌, ಸನ್‌ ಫಾರ್ಮಾ, ಸಿಪ್ಲಾ, ವಿಪ್ರೋ, ಇನ್‌ಫೋಸಿಸ್‌ ಟಾಪ್‌ ಲೂಸರ್‌ ಎನಿಸಿಕೊಂಡವು. ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಸಂಖ್ಯೆ 2,840. ಇವುಗಳಲ್ಲಿ ಮುನ್ನಡೆ ಸಾಧಿಸಿದವುಗಳು 1,429. ಹಿನ್ನಡೆಗೆ ಗುರಿಯಾದವುಗಳು 1,244; ಯಾವುದೇ ಬದಲಾವಣೆ ಕಾಣದವುಗಳು 167 ಶೇರುಗಳು. 

Advertisement

Udayavani is now on Telegram. Click here to join our channel and stay updated with the latest news.

Next