Advertisement

ದಿನಪೂರ್ತಿ ಎದ್ದುಬಿದ್ದ ಮುಂಬಯಿ ಶೇರು ಪೇಟೆ : 181 ಅಂಕ ನಷ್ಟ

04:47 PM Oct 22, 2018 | |

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ದಿನಪೂರ್ತಿ ನಡೆದ ಏಳುಬೀಳುಗಳ ವಹಿವಾಟಿನಲ್ಲಿ ಅಂತಿಮವಾಗಿ 181.25 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 34,134.38 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 58.30 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,245.25 ಅಂಕಗಳ ಮಟ್ಟದಲ್ಲಿ ಮುಗಿಸಿತು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,764  ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟಡವು. ಈ ಪೈಕಿ ಕೇವಲ 824 ಶೇರುಗಳು ಮುನ್ನಡೆ ಸಾಧಿಸಿದವು; 1,774 ಶೇರುಗಳು ಹಿನ್ನಡೆಗೆ ಗುರಿಯಾದವು; 166 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

ಇಂದಿನ ಟಾಪ್‌ ಗೇನರ್‌ಗಳು : ಇಂಡಿಯಾ ಬುಲ್ಸ್‌ ಹೌಸಿಂಗ್‌, ಈಶರ್‌ ಮೋಟರ್‌, ಐಸಿಐಸಿಐ ಬ್ಯಾಂಕ್‌, ಎಚ್‌ ಸಿ ಎಲ್‌ ಟೆಕ್‌, ಎನ್‌ ಟಿ ಪಿ ಸಿ; ಟಾಪ್‌ ಲೂಸರ್‌ಗಳು : ಇಂಡಸ್‌ ಇಂಡ್‌ ಬ್ಯಾಂಕ್‌, ಬಿಪಿಸಿಎಲ್‌, ಅಲ್‌ಟ್ರಾ ಟೆಕ್‌ ಸಿಮೆಂಟ್‌, ರಿಲಯನ್ಸ್‌, ಬಜಾಜ್‌ ಫಿನ್‌ ಸರ್ವ್‌. 

Advertisement

Udayavani is now on Telegram. Click here to join our channel and stay updated with the latest news.

Next