ಮುಂಬಯಿ : ಕೇಂದ್ರ ಸರಕಾರ ಇನ್ನು ಕೆಲವೇ ದಿನಗಳಲ್ಲಿ ಮಂಡಿಸಲಿರುವ ಮಧ್ಯಾವಧಿ ಬಜೆಟ್‌ನಲ್ಲಿ ಕೆಲವೊಂದು ಜನಪರ ಪ್ರಕಟನೆಗಳ ಇದ್ದಾವು ಎಂಬ ನಿರೀಕ್ಷೆಯಲ್ಲಿ ಈಗಲೇ ಏಳುಬೀಳಿನ ಓಲಾಟವನ್ನು ಆರಂಭಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 368.84 ಅಂಕಗಳ ನಷ್ಟದೊಂದಿಗೆ 35,565.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 119 ಅಂಕಗಳ ನಷ್ಟದೊಂದಿಗೆ 10,661.55 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿಯೇ ಇಂದು ಬಹುತೇಕ ಮುಂಬಯಿ ಶೇರು ಪೇಟೆಯಲ್ಲಿ ಪ್ರತಿಫಲಿಸಿತು.
ಇಂದಿನ ಟಾಪ್ ಗೇನರ್‌ಗಳು : ಝೀ ಎಂಟರ್‌ಟೇನ್‌ಮೆಂಟ್, ಭಾರ್ತಿ ಇನ್‌ಫ್ರಾಟೆಲ್, ಕೋಲ್ ಇಂಡಿಯಾ, ಟಿಸಿಎಸ್, ಲಾರ್ಸನ್; ಟಾಪ್ ಲೂಸರ್‌ಗಳು : ಅದಾನಿ ಪೋರ್ಟ್, ಇಂಡಿಯಾಬುಲ್ಸ್ ಹೌಸಿಂಗ್, ಎಸ್ ಬ್ಯಾಂಕ್, ಬಜಾಜ್ ಫಿನಾನ್ಸ್, ಬಜಾಜ್ ಫಿನ್‌ಸರ್ವ್.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,715 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 597 ಶೇರುಗಳು ಮುನ್ನಡೆ ಸಾಧಿಸಿದವು; 1,962 ಶೇರುಗಳು ಹಿನ್ನಡೆಗೆ ಗುರಿಯಾದವು; 156ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.