ಮುಂಬಯಿ : ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ವೈಮಾನಿಕ ದಾಳಿ ಆರಂಭಿಸಿರುವಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿಲ್ಲಿ 350ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ದೌರ್ಬಲ್ಯದಿಂದಾಗಿಯೂ ಮುಂಬಯಿ ಶೇರು ಪೇಟೆಯಲ್ಲಿಂದು ಬ್ಯಾಂಕಿಂಗ್, ಪವರ್, ಐಟಿ ಮತ್ತು ಮೆಟಲ್ ರಂಗದ ಶೇರುಗಳು ತೀವ್ರ ಮಾರಾಟದ ಒತ್ತಡಕ್ಕೆ ಗುರಿಯಾದವು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 399.60 ಅಂಕಗಳ ನಷ್ಟದೊಂದಿಗೆ 35,813.78 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 119.60 ಅಂಕಗಳ ನಷ್ಟದೊಂದಿಗೆ 10,760.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್ ಬ್ಯಾಂಕ್, ಜೆಎಸ್‌ಡಬ್ಲ್ಯು, ಹಿಂಡಾಲ್ಕೋ, ವೇದಾಂತ, ಇಂಡಿಯಾ ಬುಲ್ಸ್ ಹೌಸಿಂಗ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟಿಸಿಎಸ್, ಟಾಟಾ ಮೋಟರ್, ಬಜಾಜ್ ಫಿನ್‌ಸರ್ವ್, ಎಚ್‌ಯುಎಲ್, ಅಲ್‌ಟ್ರಾ ಟೆಕ್ ಸಿಮೆಂಟ್;
ಟಾಪ್ ಲೂಸರ್‌ಗಳು : ಎಸ್ ಬ್ಯಾಂಕ್, ಜೆಎಸ್‌ಡಬ್ಲ್ಯು ಸ್ಟೀಲ್, ಹಿಂಡಾಲ್ಕೋ, ವೇದಾಂತ, ಇಂಡಿಯಾಬುಲ್ಸ್ ಹೌಸಿಂಗ್.
ಡಾಲರ್ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 30 ಪೈಸೆಗಳ ನಷ್ಟಕ್ಕೆ ಗುರಿಯಾಗಿ 71.30 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.