ಮುಂಬಯಿ : ವಹಿವಾಟುದಾರರು ಹಾಗೂ ಹೂಡಿಕೆದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 57.92 ಅಂಕಗಳ ನಷ್ಟದೊಂದಿಗೆ 31,213.36 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 16.65 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,647.25 ಅಂಕಗಳ ಮಟ್ಟದಲ್ಲಿ ಮುಕ್ತಾಯಗೊಳಿಸಿತು.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,326 ಶೇರುಗಳು ಮುನ್ನಡೆ ಸಾಧಿಸಿದರು 1,354 ಶೇರುಗಳು ಹಿನ್ನಡೆಗೆ ಗುರಿಯಾದವು; 177 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಫಾರ್ಮಾ ಶೇರುಗಳ ಪೈಕಿ ಡಾ.ರೆಡ್ಡಿ ಮತ್ತು ಸನ್ ಫಾರ್ಮಾ ಅತೀ ಹೆಚ್ಚು ಗಳಿಕೆ ದಾಖಲಿಸಿದವು. ಗೇಲ್, ಟಿಸಿಎಸ್ ಟಾಪ್ ಲೂಸರ್ ಎನಿಸಿದವು.
ಐಟಿ ಶೇರುಗಳ ಪೈಕಿ ಇನ್‌ಫೋಸಿಸ್ ತೀವ್ರ ಒತ್ತಡಕ್ಕೆ ಗುರಿಯಾಗಿ ಶೇ.1ರ ನಷ್ಟ ಅನುಭವಿಸಿತು. ನಿನ್ನೆ ಇನ್‌ಫೋಸಿಸ್ ಶೇರು ಶೇ.3ರ ನಷ್ಟಕ್ಕೆ ಗುರಿಯಾಗಿತ್ತು.