ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವ ತೋಜಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 227 ಅಂಕಗಳ ಉತ್ತಮ ಮುನ್ನಡೆಯನ್ನು ಸಾಧಿಸಿದೆ. ಎಫ್ಎಂಸಿಜಿ, ಐಟಿ ಶೇರುಗಳು ಈ ಮುನ್ನಡೆಗೆ ಕಾರಣವಾಗಿವೆ.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 152.41 ಅಂಕಗಳ ಮುನ್ನಡೆಯೊಂದಿಗೆ 30,617.33 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 30.20 ಅಂಕಗಳ ಮುನ್ನಡೆಯೊಂದಿಗೆ 9,458.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ವಿದೇಶಿ ಕಂಪೆನಿಗಳ ಸಹಭಾಗಿತ್ವದಲ್ಲಿ ಆಯ್ದ ದೇಶೀಯ ಕಂಪೆನಿಗಳನ್ನು ಜತೆಗೂಡಿಸಿಕೊಂಡು ರಕ್ಷಣಾ ಸಾಧನಗಳ ಉತ್ಪಾದನೆಗೆ ಸರಕಾರ ಪ್ರೋತ್ಸಾಹ ನೀಡಲಿದೆ ಎಂದು ರಕ್ಷಣಾ ಸಚಿವರ ಹೇಳಿರುವುದು ಕ್ಯಾಪಿಟಲ್ ಗೂಡ್ಸ್ ಕಂಪೆನಿಗಳ ಶೇರುಗಳ ಮುನ್ನಡೆಗೆ ಕಾರಣವಾಯಿತು. ಅಂತೆಯೇ ಲಾರ್ಸನ್ ಕಂಪೆನಿಯ ಶೇರು 450ರೂ.ಗಳಷ್ಟು ಏರಿತು. ಬಿಇಎಲ್, ಬಿಎಚ್‌ಇಎಲ್ ಶೇರು ಕೂಡ ಇದೇ ರೀತಿಯ ಮುನ್ನುಗ್ಗಿದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಐಟಿಸಿ, ಭಾರ್ತಿ ಏರ್‌ಟೆಲ್, ಎಚ್‌ಯುಎಲ್, ಎಚ್‌ಸಿಎಲ್ ಟೆಕ್, ಝಿ ಎಂಟರ್‌ಟೇನ್‌ಮೆಂಟ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು.
ಆದರೆ ಟಾಟಾ ಪವರ್, ಲೂಪಿನ್, ಎಸ್‌ಬಿಐ, ಅಂಬುಜಾ ಸಿಮೆಂಟ್ಸ್, ಸನ್ ಫಾರ್ಮಾ ಟಾಪ್ ಲೂಸರ್ ಎನಿಸಿಕೊಂಡವು.