Advertisement

ಮಸ್ಕಿ ಉಪಚುನಾವಣೆ ಹಾದಿ ಸುಗಮ: ದಾವೆ ಹಿಂಪಡೆದ ಬಸನಗೌಡ ತುರ್ವಿಹಾಳ

07:07 PM Jan 24, 2020 | Mithun PG |

ರಾಯಚೂರು: ಮಸ್ಕಿ ಶಾಸಕರಿಂದ ಅಡ್ಡ ಮತದಾನ ನಡೆದಿದೆ ಎಂದು ಆರೋಪಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ಬಸನಗೌಡ ತುರ್ವಿಹಾಳ ಕೊನೆಗೂ ಹಿಂಪಡೆದಿದ್ದು, ಉಪಚುನಾವಣೆ ಹಾದಿ ಸುಗಮವಾಗಿದೆ.

Advertisement

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಸನಗೌಡ ತುರ್ವಿಹಾಳ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ  213 ಮತಗಳಿಂದ ಸೋಲುಂಡಿದ್ದರು.ಆ ವೇಳೆಯಲ್ಲಿ ಕಾಂಗ್ರೆಸ್ ನಲ್ಲಿದ್ದ ಪ್ರತಾಪಗೌಡ ಪಾಟೀಲ ಭರ್ಜರಿ ಜಯಗಳಿಸಿದ್ದರು.  ಆದರೆ, ವಿದೇಶದಲ್ಲಿರುವ ಶಾಸಕ ಪ್ರತಾಪ್ ಗೌಡರ ಪುತ್ರಿ ಅವರ ಮತವೂ ಚಲಾವಣೆಯಾಗಿತ್ತು. ಇದೇ ರೀತಿ ಸಾಕಷ್ಟು ಅಡ್ಡ ಮತಗಳು ಚಲಾವಣೆಗೊಂಡಿವೆ ಎಂದು ತುರ್ವಿಹಾಳ ದೂರಿದ್ದರು.

ಆದರೆ ಅರ್ಜಿ ಸಲ್ಲಿಸಿ ಸಾಕಷ್ಟು ತಿಂಗಳಾದರೂ  ಪ್ರಕರಣದ ವಿಚಾರಣೆ ನಡೆದಿರಲಿಲ್ಲ. ಇದರಿಂದ ರಾಜ್ಯದ  15 ಕ್ಷೇತ್ರದ ಉಪಚುನಾವಣೆ ನಡೆದರೂ ಮಸ್ಕಿಯಲ್ಲಿ ನಡೆಯಲಿಲ್ಲ. ಆದರೆ ಹೈಕಮಾಂಡ್ ಒತ್ತಡಕ್ಕೆ ಮಣಿದು ಬುಧವಾರ ಅರ್ಜಿ ಹಿಂಪಡೆದಿದ್ದಾರೆ. ಅಲ್ಲದೇ ಬಸನಗೌಡರಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಅವರು ಕೂಡ ಹಿಂದೆ ಅಧಿಕಾರ ಸ್ವೀಕರಿಸಿದ್ದರು. ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದರು. ಈಗ ಪುನಹ ಅಧಿಕಾರ ಸ್ವೀಕರಿಸುವಂತೆ ವರಿಷ್ಠರು ಸೂಚಿಸಿದ್ದು ಶೀಘ್ರದಲ್ಲೇ ಸ್ವೀಕರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಉಪಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಮಸ್ಕಿ ಚಿತ್ರಣವೇ ಬದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next