Advertisement

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

05:42 PM May 01, 2024 | Team Udayavani |

ಹೊಳೆಹೊನ್ನೂರು : ಮುಂದಿನ ದಿನಗಳಲ್ಲಿ ಬಿಜೆಪಿ ಜೆಡಿಎಸ್ ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

Advertisement

ಸಮೀಪದ ಸೂಗೂರಿನಲ್ಲಿ ಬುಧವಾರ ಹೊಳಲೂರು ಮಹಾಶಕ್ತಿ ಕೇಂದ್ರ ವತಿಯಿಂದ ಹಮ್ಮಿಕೊಂಡದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವವರು ಭಯ ಪಡಬೇಕು ಆ ರೀತಿಯ ಬಹುಮತಗಳೊಂದಿಗೆ ಬಿ.ವೈ ರಾಘವೇಂದ್ರ ಗೆದ್ದು ಬರಲಿದ್ದಾರೆ ರಾಜ್ಯ ಸರ್ಕಾರ ಸ್ಥಗಿತವಾಗಿದು ಸಂಪೂರ್ಣವಾಗಿ ದಿವಾಳಿಯಾಗಿದೆ. ಜನ ಹಿತ ಮರೆತು ತುಘಲಕ್ ಆಢಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ದೂಳಿಪಟ ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಯಾವೊಬ್ಬ ಮತದಾರರನು ಒಲವು ತೋರುತ್ತಿಲ್ಲ. ಕಾಂಗ್ರೆಸ್‌ಗೆ ದಿಕ್ಕು ದೆಸೇ ಇಲ್ಲ. ನಾಯಕನಿಲ್ಲದ ಹಡಗಿನ ಕಡೆ ತಿರುಗಿ ನೋಡದಂತೆ ಈ ಬಾರಿ ಬಿಜೆಪಿ ಮತ ನೀಡಿ ಮಹಿಳಾ ಮತದಾರರು ಪಕ್ಷ ಬೆಂಬಲಿಸುತ್ತಿರುವುದು ಆಶಾದಾಯಕ ಬೆಳವಣಿಗೆ.

ಈ ಚುನಾವಣೆ ನಂತರ ಕಾಂಗ್ರೆಸ್ ಧೂಳಿಪಟ ಆಗುವುದು ನಿಶ್ಚಿತ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮಹಿಳಾ ಸಭಲಿಕರಣ ಬಿಜೆಪಿ ಯಿಂದ ಮಾತ್ರ ಸಾಧ್ಯ ಎಂದರು.

ಮತದಾರರು ಜಾಗೃತರಾಗಿದ್ದಾರೆ ಚುನಾವಣೆಗಳಲ್ಲಿ ಹಣದ ಬಲ ಬಳಸಿ ಜಾತಿಯ ವಿಷ ಬೀಜ ಬಿತ್ತಿ ಗೆಲ್ಲುವು ಸಾದಿಸುವುದು ಸುಲಭವಲ್ಲ. ಪ್ರಧಾನಿ ನರೇಂದ್ರ ಮೊದಿ 10 ವರ್ಷದಲ್ಲಿ ಒಂದು ದಿನವು ವಿಶ್ರಾಂತಿ ತೆಗೆದುಕೊಂಡಿಲ್ಲ. ವಿಶ್ವವೇ ದೇಶದ ಕಡೆ ತಿರುಗಿ ನೋಡುವಂತಾಗಿದೆ. ನಾನು ಜಾರಿ ಮಾಡಿದ ಭಾಗ್ಯಲಕ್ಷ್ಮಿ, ಸುವರ್ಣಗ್ರಾಮ, ಸುವರ್ಣ ಭೂಮಿ ಯೋಜನೆಗಳು ನಿಂತು ಹೋಗಿವೆ. ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಘವೇಂದ್ರ ಬಗ್ಗೆ ಕೆಲವರು ಹಗುರವಾಗಿ ಮಾತನಾಡ್ತಿದ್ದಾರೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ ರಾಜ್ಯದ ೨೮ ಲೋಕಸಭಾ ಕ್ಷೇತ್ರದಲ್ಲಿ 28 ಸ್ಥಾನವನ್ನೂ ಬಿಜೆಪಿ ಗೆಲ್ಲಲಿದೆ ಎಂದರು.

Advertisement

ಶಾಸಕಿ ಶಾರದ ಪರ‍್ಯಾನಾಯ್ಕ್ , ಮಾಜಿ ಶಾಸಕ ಅಶೋಕ್‌ನಾಯ್ಕ್, ಮಹಿಳಾಧ್ಯಕ್ಷೆ ನಾಗರತ್ನ, ವೈದ್ಯ ಡಾ|| ದನಂಜಯ್ ಸರ್ಜಿ, ದಿನೇಶ್, ಷಣುಖಪ್ಪ, ರವೀಶ್, ನವೀಲಯ್ಯ, ಷಡಾಕ್ಷರಪ್ಪ, ಬಸವರಾಜಪ್ಪ, ಸಂತೋಷ್, ಕಾಂತರಾಜ್, ಸತೀಶ್ ಕಶೇಟ್ಟಿ, ಅಶೋಕ್, ಶ್ರೀನಿವಾಸ್ ಇತರರಿದ್ದರು.

ಇದನ್ನೂ ಓದಿ: ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Advertisement

Udayavani is now on Telegram. Click here to join our channel and stay updated with the latest news.

Next