Advertisement

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

12:36 PM May 05, 2024 | Suhan S |

ಶಿವಮೊಗ್ಗ: ನಗರದ ಆಟೋ ಕಾಂಪ್ಲೆಕ್ಸ್ ನಲ್ಲಿ ಬಿಜೆಪಿ ವತಿಯಿಂದ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕಮಲದ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.‌

Advertisement

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಬೇಕು. ಈ ಹಿನ್ನೆಲೆಯಲ್ಲಿ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕ್ರಮ ಸಂಖ್ಯೆ 2ರ ಕಮಲದ ಗುರುತಿಗೆ ಮತವನ್ನು ನೀಡುವ ಮೂಲಕ ನಾಲ್ಕನೇ ಬಾರಿಗೆ ಸಂಸದನನ್ನಾಗಿ ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿ ಕೊಡಬೇಕೆಂದು ಮನವಿ ಮಾಡಿದರು.

ಶಾಸಕರಾದ ಎಸ್‌.ಎನ್‌. ಚನ್ನಬಸಪ್ಪ, ಎಸ್‌. ರುದ್ರೇಗೌಡ ಮುಖಂಡರಾದ ಎಸ್‌. ದತ್ತಾತ್ರಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳ್‌ ಗೋಪಾಲ್‌ ಇತರರು ಇದ್ದರು.

ರಾಜ್ಯ ಸರ್ಕಾರ ದಿವಾಳಿ: ಬಿಎಸ್‌ವೈ :

ಸೊರಬ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ 25 ಸಾವಿರ ಬಹುಮತ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಲೋಕಸಭಾ ಚುನಾವಣೆ ಪ್ರಯುಕ್ತ ಬಿಜೆಪಿ ಸೊರಬ ಮಂಡಲದ ವತಿಯಿಂದ ಪಟ್ಟಣದ ಖಾಸಗಿ ಬಸ್‌ ನಿಲ್ದಾಣ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಬೃಹತ್‌ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಅರು ಸಾವಿರ ನೀಡುತ್ತಿತ್ತು. ನಾವು ನೀಡುವ ನಾಲ್ಕು ಸಾವಿರ ರೂಪಾಯಿ ಏಕೆ ನಿಲ್ಲಿಸಿದಿರಿ. ರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ. ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ಕಾಂಗ್ರೆಸ್‌ನವರು ಹಣಬಲ, ತೋಳ್ಬಲದ ಮೇಲೆ ಚುನಾವಣೆಯ ಭ್ರಮೆಯಲ್ಲಿ ಇದ್ದಾರೆ. ಜನರು ಪ್ರಜ್ಞಾವಂತರಾಗಿದ್ದಾರೆ. ರಾಜ್ಯದಲ್ಲಿ ರೈತ ಬರಗಾಲಕ್ಕೆ ಸಿಲುಕಿದ್ದಾನೆ. ಕುಡಿಯಲು ನೀರಿಲ್ಲ. ಸಂಕಷ್ಟಕ್ಕೆ ಸಿಲುಕಿದ್ದಾನೆ. ನಮ್ಮ ಅಧಿಕಾರದ ಅವ ಧಿಯಲ್ಲಿ ಜಾರಿ ಮಾಡಿದ ಯೋಜನೆಗಳನ್ನು ಏಕೆ ನಿಲ್ಲಿಸಿದಿರಿ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಮಾತನಾಡಿ, ಅಭಿವೃದ್ಧಿಯೇ ನಮ್ಮ ಗುರಿ. ಕ್ಷುಲ್ಲಕ ರಾಜಕಾರಣಕ್ಕಾಗಿ ಇಲ್ಲ ಸಲ್ಲದ ಆರೋಪಗಳನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. 39 ಸ್ಥಾನದಲ್ಲಿದ್ದ ಬಿಜೆಪಿಯನ್ನು 79 ಸ್ಥಾನ ಪಡೆದು ಬೆಳೆಯಲು ಬಂಗಾರಪ್ಪನವರು ಕಾರಣ. ರಾಜ್ಯ ಸರ್ಕಾರ ಚುನಾವಣೆ ಮುಗಿದ ನಂತರ ಬಿದ್ದು ಹೋಗುತ್ತದೆ ಎಂದು ಭವಿಷ್ಯ ನುಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಎಚ್‌. ಹಾಲಪ್ಪ ಮಾತನಾಡಿ, ವಿರೋಧ ಪಕ್ಷದವರು ಜಾತಿಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ನಾವು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ ಎಂದರು.

ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಮಾತನಾಡಿ, ದೇಶದ ರಾಮ ಮಂದಿರ ಉಳಿಯಲು ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಬಿಜೆಪಿ ಆಡಳಿತ ಅವಧಿ ಯಲ್ಲಿ ಆಗಿರುವ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆ ಎದುರಿಸಲಾಗುವುದು ಎಂದರು. ಶಾಸಕ ಶ್ರೀವತ್ಸ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌, ಭಾರತಿ ಶೆಟ್ಟಿ, ದತ್ತಾತ್ರಿ, ಮಂಜಪ್ಪ, ವಿ.ಜಿ. ಪರಶುರಾಮ್‌, ಚನ್ನಬಸಪ್ಪ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳ್‌ ಗೋಪಾಲ, ಪ್ರಕಾಶ್‌ ತಲಕಾಲಕೊಪ್ಪ, ಡಾ| ಜ್ಞಾನೇಶ್‌, ಪಾಣಿ ರಾಜಪ್ಪ, ಎಂ.ಡಿ. ಉಮೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next