Advertisement
ಅರಮನೆ ಮೈದಾನದ ಆವರಣದಲ್ಲಿ ಗುರುವಾರ ಆಯೋಜನೆಯಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. “ನನಗೆ 60 ವರ್ಷ ತುಂಬಿದಾಗ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಉಪಸ್ಥಿತಿಯಲ್ಲಿ ನಾನಾ ಮಠಾಧೀಶರ ಸಮ್ಮುಖದಲ್ಲಿ ಇದೇ ಅರಮನೆ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಜೀವನದಲ್ಲಿ ಮರೆಯುವುದಿಲ್ಲ. ಇದೀಗ ಅಂತಹುದೇ ಅಪೂರ್ವ ಸಮಾರಂಭವೊಂದಕ್ಕೆ 78ನೇ ಹುಟ್ಟುಹಬ್ಬ ಸಾಕ್ಷಿಯಾಗಿದೆ. ಕೇಂದ್ರ ಸಚಿವರಾದ ರಾಜನಾಥ ಸಿಂಗ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಳ್ಳೆಯ ಮಾತುಗಳನ್ನಾಡಿರುವ ಈ ಸಮಾರಂಭವನ್ನೂ ಎಂದೂ ಮರೆಯಲಾರೆ.
Related Articles
“ಇಂದು ಅನಂತ ಕುಮಾರ್ ಅವರು ಬದುಕಿರಬೇಕಿತ್ತು. ಅವರೊಂದಿಗೆ ನಾನು ರಾಜ್ಯ ಸುತ್ತಾಡಿದ್ದನ್ನು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ. ಒಂದೆರಡು ಶಾಸಕರಿದ್ದ ಪಕ್ಷವನ್ನು ಇಷ್ಟು ಎತ್ತರಕ್ಕೆ ಬಳಸುವಲ್ಲಿ ಅನಂತ್ ಕುಮಾರ್ ಅವರ ಕೊಡುಗೆಯೂ ಅಪಾರವಾಗಿದೆ’ ಎಂದು ಹೇಳಿದರು.
Advertisement
ಪಂಡಿತ್ ದೀನದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಇತರ ನಾಯಕರ ಪ್ರಭಾವಕ್ಕೆ ಒಳಗಾಗಿ ಜನಸೇವೆಗೆ ಮುಂದಾದೆ. ಅಧಿಕಾರ ಇರುವುದು ಜನಸೇವೆಗೆ. ಚುನಾವಣಾ ರಾಜಕೀಯದಲ್ಲಿ ಪಕ್ಷದ ಒಳಗೂ, ಹೊರಗೂ ವೈಮನಸ್ಸು ತಲೆದೋರಬಹುದು. ಅದನ್ನೆಲ್ಲಾ ಮರೆತು ಎಲ್ಲರೂ ಒಟ್ಟಾಗಿ ಸೇರಿದ್ದೇವೆ. ಪಕ್ಷದ ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ಪಕ್ಷವನ್ನು ಬಲಪಡಿಸುವ ಕೆಲಸ ಆಗಬೇಕಿದೆ. ಆಡಳಿತ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಿ ಜನರಿಗೆ ಸೇವೆ ಸಲ್ಲಿಸೋಣ ಎಂದು ಆಶಿಸಿ, ಮಾತಿಗೆ ವಿರಾಮ ಹೇಳಿದರು.
ಬಿಎಸ್‌ವೈಗೆ ಸನ್ಮಾನ:ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಸಮ್ಮುಖದಲ್ಲಿ ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹೊದಿಸಿ, ಶ್ರೀಗಂಧದ ಹಾರ ಹಾಕಿ, ಬೆಳ್ಳಿ ನೇಗಿಲು ನೀಡಿ ಅಭಿನಂದನೆ ಸಲ್ಲಿಸಲಾಯಿತು.