ವಿಜಯಪುರ: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಧ್ವನಿ ಎತ್ತಿದವರಲ್ಲಿ ಯತ್ನಾಳ ಕೂಡ ಒಬ್ಬರು. ಹೀಗಾಗಿ ಸಿಎಂ ಬದಲಾವಣೆ ಕುರಿತು ನೀಡಿದ ಹೇಳಿಕೆ ಸಣ್ಣ ವ್ಯತ್ಯಾಸವೇ ಹೊರತು, ಯಾರೂ ಈ ವಿಷಯದ ಕುರಿತು ಆದ್ಯತೆ ನೀಡಬೇಡಿ. ಈಗಾಗಲೇ ಯತ್ನಾಳ ಅವರೊಂದಿಗೆ ಮಾತನಾಡಿದ್ದೇನೆ. ಇನ್ನು,15 ದಿನ ಕಾಯಿರಿ ಎಲ್ಲಕ್ಕೂ ಉತ್ತರ ಸಿಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯತ್ನಾಳ ಜೊತೆ ಔಪಚಾರಿಕ ಮಾತನಾಡಿದ್ದು, ಸಂಧಾನ ಯಶಸ್ವಿಯಾಗಿದೆ. ಇನ್ನು 15 ದಿನ ಕಾಯಿರಿ ಎಲ್ಲವೂ ಸ್ಪಷ್ಟವಾಗುತ್ತೆ ಎಂದರು.
ರಾಜ್ಯದಲ್ಲಿ ಒಂದು ಹೊಸ ಸಂದೇಶ ಹೋಗಬೇಕಿದೆ. ಯತ್ನಾಳ ಅವರಿಗೆ ಈಗಿನ್ನು 55 ವಯಸ್ಸು, ರಾಜಕೀಯದಲ್ಲಿ ಅವರಿಗೆ ಇನ್ನೂ 25 ವರ್ಷ ಉತ್ತಮ ಭವಿಷ್ಯವಿದೆ, ಯತ್ನಾಳ ಅನುಭವ ಬಳಸಿಕೊಳ್ಳಲು ಹೆಚ್ಚಿನ ಆದ್ಯತೆ ಸಿಗಲಿದೆ. ಯತ್ನಾಳ ಜೊತೆ ಮಾತುಕತೆ ಯಶಸ್ವಿಯಾಗಿದೆ. ಅವರೂ ಖುಷಿ ಆಗಿರುವುದನ್ನು ನೀವೇ ನೋಡುತ್ತಿದ್ದೀರಿ ಎಂದು ಸಚಿವ ಸೋಮಣ್ಣ ಹೇಳಿದರು.
ಇದನ್ನೂ ಓದಿ:ಚುನಾವಣೆಯಲ್ಲಿ ಜಾತಿ, ದುಡ್ಡು, ಗೂಂಡಾ ರಾಜಕಾರಣ ಯಾವುದು ನಡೆಯಲ್ಲ: ಈಶ್ವರಪ್ಪ
ಯತ್ನಾಳ ಸಚಿವರಾಗಬಾರದೇ, ಆದರೆ ಯಾರನ್ನು ಸಚಿರನ್ನಾಗಿ ಮಾಡಬೇಕೆಂದು ಸಿ.ಎಂ. ನಿರ್ಧರಿಸಲಿದ್ದಾರೆ, ಅದು ಅವರ ಪರಮಾಧಿಕಾರ. ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರ ಅದು ಸಿಎಂ ಪರಮಾಧಿಕಾರ.
ಹೈಕಮಾಂಡ ಜೊತೆ ಸಮಾಲೋಚನೆ ಮಾಡುವುದು ಅವರಿಗೆ ಬಿಟ್ಟಿದ್ದು. ಸಂಪುಟ ಸಚಿವರಲ್ಲಿ ಯಾರು ಕೆಲಸ ಮಾಡುತ್ತಾರೆ, ಇಲ್ಲ ಎಂಬುದು ಸಿಎಂ ಅವರಿಗೆ ಗೊತ್ತಿದೆ ಎಂದರು.
ನಾನು ಯಾವ ಖಾತೆ ನೀಡಿದರೂ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಈಗ ನೀಡಿರುವ ವಸತಿ ಖಾತೆಯಲ್ಲೂ ನನಗೆ ತೃಪ್ತಿ ಇದೆ ಎಂದರು.