Advertisement

ಬಿಎಸ್‌ವೈಯಿಂದ ಲಿಂಗಾಯತರಿಗೆ ಅನ್ಯಾಯ

01:10 PM Apr 17, 2017 | Team Udayavani |

ದಾವಣಗೆರೆ: ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಂದಲೇ ರಾಜ್ಯದ ಲಿಂಗಾಯತ ಸಮಾಜಕ್ಕೆ ಅಪಮಾನ, ಅನ್ಯಾಯ ಆಗುತ್ತಿದೆ ಎಂದು ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್‌ ಹೇಳಿದ್ದಾರೆ. ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ 10-12 ಸಂಸದರಲ್ಲಿ ಒಬ್ಬರೇ ಒಬ್ಬರಿಗೆ ಕೇಂದ್ರ ಸಂಪುಟದಲ್ಲಿ ಸಚಿವ  ನ ನೀಡಿಲ್ಲ. ಒಬ್ಬರಿಗೆ ಕೊಟ್ಟಂತೆ ಮಾಡಿ, ಕಿತ್ತು ಹಾಕಿದರು.

Advertisement

ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರ ಕಾರಣದಿಂದಲೇ ಲಿಂಗಾಯತ ಸಮಾಜವನ್ನು ನಿರ್ಲಕ್ಷé ಮಾಡಲಾಗುತ್ತಿದೆ. ಈ ಬಗ್ಗೆ ಒಂದು ಬಾರಿಯೂ ಬಿ.ಎಸ್‌. ಯಡಿಯೂರಪ್ಪ ಪ್ರಧಾನಿ ಮುಂದೆ ಧ್ವನಿ ಎತ್ತಿಲ್ಲ. ಅಂತಹ ನೈತಿಕತೆ, ಶಕ್ತಿ ಅವರಲ್ಲಿ ಇಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಕಡು ಭ್ರಷ್ಟಾಚಾರದ ಕಾರಣಕ್ಕೆ 24 ದಿನ ಜೈಲು ವಾಸ ಅನುಭವಿಸಿರುವ ಯಡಿಯೂರಪ್ಪ ಅವರನ್ನು ಲಿಂಗಾಯತ ಸಮುದಾಯದ ನಾಯಕರು ಎನ್ನಲಾಗುತ್ತಿದೆ. ನಿಜಕ್ಕೂ ಅವರು ಲಿಂಗಾಯತ ನಾಯಕರಲ್ಲ. ಯಾವುದೇ ಭ್ರಷ್ಟಾಚಾರ ಇಲ್ಲದೆ ಜನಸೇವೆ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಸಕ ಶಾಮನೂರು ಶಿವಶಂಕರಪ್ಪ ನಿಜವಾಗಿಯೂ ಲಿಂಗಾಯತ ನಾಯಕರು ಎಂದು ತಿಳಿಸಿದರು. 

ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಗೆಲುವು ಆಡಳಿತಕ್ಕೆ ಸಿಕ್ಕ ಜನಮನ್ನಣೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುತ್ತೇವೆ ಎಂಬ ಭ್ರಮೆಯಲ್ಲಿದ್ದವರಿಗೆ ತಕ್ಕ ಪಾಠ ಕಲಿಸಿದರು. ಆದರೂ, ಸೋತರು ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ. ನಾನೇ ಅಭ್ಯರ್ಥಿಯೆಂದು ತಿಳಿದುಕೊಂಡು ಮತ ಚಲಾಯಿಸಿ ಎಂದು ಯಡಿಯೂರಪ್ಪ ಹೇಳುತ್ತಿದ್ದರು.

ಅವರು ಯಾವ ಕಾರಣಕ್ಕೂ ಮುಖ್ಯಮಂತ್ರಿ ಆಗಬಾರದು ಎನ್ನುವ ಕಾರಣಕ್ಕಾಗಿಯೇ ಎರಡೂ ಕ್ಷೇತ್ರದಲ್ಲಿ ಮತದಾರರು ಬಿಜೆಪಿಯನ್ನು ಸೋಲಿಸಿದರು ಎಂದರು. ಎರಡು ಕ್ಷೇತ್ರ ಅಭಿವೃದ್ಧಿಪಡಿಸುವ ಬಗ್ಗೆ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಿದ್ದರು. ಅನೇಕ ಕ್ಷೇತ್ರದಲ್ಲಿ ಇದೇ ಮಾತು ಹೇಳಿರುವ ಅವರು ಒಮ್ಮೆಯೂ ಅತ್ತ ತಿರುಗಿ ನೋಡಿಲ್ಲ.

Advertisement

ಒಬ್ಬ ವ್ಯಕ್ತಿ ಆರೋಗ್ಯವಾಗಿ ಇರಬೇಕಾದರೆ ಕನಿಷ್ಟ ಐದೂವರೆ ಲೀಟರ್‌ ರಕ್ತದ ಅವಶ್ಯಕತೆ ಇದೆ. ಹಾಗಾಗಿ ಯಡಿಯೂರಪ್ಪ ಅವರು ಮತಕ್ಕಾಗಿ ದೇಹದ ರಕ್ತ ಖಾಲಿ ಮಾಡಿಕೊಳ್ಳದಿರಲಿ ಎಂದು ಮನವಿ ಮಾಡಿದರು. ಎರಡು 25 ಸಾವಿರಕ್ಕೂ ಅಧಿಧಿಕ ಮತಗಳಿಂದ ಗೆಲ್ಲುತ್ತೇವೆ. ಒಂದೇ ಒಂದು ಮತದ ಅಂತರ ಕಡಿಮೆಯಾದರೆ ಮುಂದೆ ಯಾವುದೇ ಚುನಾವಣೆಯ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಸಂಸದೆ ಶೋಭಾ ಕರಾಂದ್ಲಾಜೆ ಹೇಳುತ್ತಿದ್ದರು.

25 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಹೇಳಿದಂತೆ  ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸಬ್‌ ಕ ಸಾತ್‌ ಸಬ್‌ ಕ ವಿಕಾಸ್‌… ಎಂದು ಮೋದಿ ಹೇಳುತ್ತಾರೆ. ಆದರೆ, ಬಿಜೆಪಿಯವರು ಅಲ್ಪಸಂಖ್ಯಾತರಿಗೆ ಸವಿಂಧಾನ ಬದ್ಧವಾಗಿ ಬಜೆಟ್‌ನಲ್ಲಿ ಹಣ ತೆಗೆದರೆ ಕ್ಯಾತೆ ತೆಗೆಯುತ್ತಾರೆ. ಇಂತಹ ದ್ವಂದ್ವ ನೀತಿ ಕೈ ಬಿಡಬೇಕು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯಾನಂದಧಿ ಯೋಗಿಯವರು ಅಲ್ಪಸಂಖ್ಯಾತರಿಗೆ ಶಾದಿಭಾಗ್ಯ ಯೋಜನೆ ಜಾರಿ ಮಾಡುತ್ತಿದ್ದಾರೆ. ಮೀಸಲಾತಿ ರದ್ಧತಿಗೆ ಪ್ರಾಯೋಗಿಕ ವೇದಿಕೆ ನಿರ್ಮಿಸತ್ತಿದ್ದಾರೆ. ಬಿಜೆಪಿಯವರು ಅದನ್ನು ಏಕೆ ವಿರೋಧಿಸುವುದಿಲ್ಲ ಎಂದು ಪ್ರಶ್ನಿಸಿದರು. ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪಿ. ರಾಜ್‌ಕುಮಾರ್‌, ಮುಖಂಡರಾದ ಅಲ್ಲಾವುಲ್ಲಿ ಗಾಜಿಖಾನ್‌, ಅಬ್ದುಲ್‌ ಘನಿ ತಾಹಿರ್‌, ಎಸ್‌.ಎಸ್‌. ಗಿರೀಶ್‌, ಯಾಸಿನ್‌ ಪೀರ್‌ ರಜ್ವಿ, ಡಿ. ಶಿವಕುಮಾರ್‌, ನೂರ್‌ ಅಹ್ಮದ್‌ ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next