Advertisement
ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ರುವುದು ಮಾತ್ರವಲ್ಲ, ಇಡೀ ರಾಜ್ಯದ ಉಸ್ತುವಾರಿ ಹೊತ್ತಿರುವುದರಿಂದ ಸಹಜ ವಾಗಿಯೇ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಹೆಚ್ಚಿದೆ. ತಮ್ಮ ಕ್ಷೇತ್ರದಲ್ಲಿ ದೊಡ್ಡ ಮತಗಳ ಅಂತರದಿಂದ ಗೆಲುವು ಸಾಧಿಸುವ ಅನಿ ವಾರ್ಯತೆಯನ್ನು ಸೃಷ್ಟಿಸಿದೆ. ಸ್ವಕ್ಷೇತ್ರದಲ್ಲಿನ ಗಟ್ಟಿ ನೆಲೆಯನ್ನು ಸಾದರಪಡಿಸುವ ಮೂಲಕ ನಾಯಕತ್ವಕ್ಕೆ ಗಟ್ಟಿತನ ಕೊಡಬೇಕಾಗಿದೆ. ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಬಿಎಸ್‌ವೈ ನಿರಾಳರಾಗಿದ್ದರು. ಆದರೆ ಇದೀಗ ಅವರ ಆಪ್ತ ವಲಯದಲ್ಲಿದ್ದ ಶಾಂತವೀರಪ್ಪಗೌಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಸಣ್ಣ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಅವರ ವಿರುದ್ಧ ದೊಡ್ಡ ಸಂಖ್ಯೆಯ ಮತಗಳೇ ಕ್ಷೇತ್ರದಲ್ಲಿವೆ. ಆದರೆ ಈ ಮತಗಳು ಕ್ರೋಡೀಕೃತಗೊಳ್ಳುತ್ತಿಲ್ಲ.
ಈ ಬಾರಿ ಕಾಂಗ್ರೆಸ್‌ನಿಂದ ಗೋಣಿ ಮಾಲತೇಶ್ ಸ್ಪರ್ಧಿಸಿದ್ದು, ಇವರು ಪ್ರಬಲ ಅಭ್ಯರ್ಥಿ ಯಾಗದಿದ್ದರೂ, ಉಳಿದವರು ಒಂದಾಗಿ ಬೆಂಬಲಿಸುವ ಸಾಧ್ಯತೆ ಕಾಣುತ್ತಿದೆ. ಜೆಡಿಎಸ್‌ನಿಂದ ನಿವೃತ್ತ ಅಧಿಕಾರಿ ಎಚ್.ಟಿ. ಬಳಿಗಾರ್ ಸ್ಪರ್ಧಿಸುತ್ತಿದ್ದು, ತ್ರಿಕೋನ ಸ್ಪರ್ಧೆ ಇರುವುದು ಯಡಿಯೂರಪ್ಪನವರಿಗೆ ಲಾಭವಾಗುವ ಇನ್ನೊಂದು ಅಂಶ. ಅವರ ವಿರುದ್ಧದ ಮತಗಳು ಹಂಚಿ ಹೋಗುತ್ತವೆ.
Related Articles
ಇಂದು ಬಿಜೆಪಿ ಕ್ಷೇತ್ರವಾಗಿ ಪರಿವರ್ತಿತ ವಾಗಿರುವ ಶಿಕಾರಿಪುರ ಕ್ಷೇತ್ರ ಒಂದು ಕಾಲದಲ್ಲಿ ಮೀಸಲು ಕ್ಷೇತ್ರವಾಗಿತ್ತು ಎಂಬುದು ವಿಶೇಷ. ಕಾಂಗ್ರೆಸ್, ಸಮಾಜವಾದಿ ಪಕ್ಷದತ್ತ ಕೂಡ ಹೊರಳಿತ್ತು. ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಈ ಕ್ಷೇತ್ರ ಬಳಿಕ ವಿಭಿನ್ನ ನೆಲೆಯಲ್ಲಿ ಹೊರಳಿಕೊಂಡಿತು.
Advertisement
1952 ಮತ್ತು 1957 ರಲ್ಲಿ ಸೊರಬ ಕ್ಷೇತ್ರದೊಂದಿಗೆ ದ್ವಿಸದಸ್ಯತ್ವ ಕ್ಷೇತ್ರವಾಗಿದ್ದ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. 1962 ರಲ್ಲಿ ಮೀಸಲು ಕ್ಷೇತ್ರವಾಗಿ ಬದಲಾದ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ, 1967 ರಲ್ಲಿ ಸೋಷಿಯಲಿಸ್ಟ್ ಪಕ್ಷದಿಂದ ಜಿ.ಬಸವಣ್ಯಪ್ಪ ದೊಡ್ಡ ಅಂತರದಿಂದ ಗೆದ್ದು ಸದ್ದು ಮಾಡಿದ್ದರು.ಆದರೆ 1972 ರಲ್ಲಿ ಮರಳಿ ಇದು ಕಾಂಗ್ರೆಸ್ ಕ್ಷೇತ್ರವಾಯಿತು. ಆಗ ಕೆ. ವೆಂಕಟಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ದೊಡ್ಡ ಅಂತರದಿಂದ ಗೆದ್ದರು. 1978 ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾವಣೆಯಾದ ಇಲ್ಲಿ ಪುನಃ ಕೆ. ವೆಂಕಟಪ್ಪ ಅವರು ಗೆದ್ದು ಸಚಿವರೂ ಆದರು. 1983 ರಲ್ಲಿ ಈ ಕ್ಷೇತ್ರ ನಿರ್ಣಾಯಕ ಸ್ಥಿತಿಯಲ್ಲಿತ್ತು.
ಆಗ ಬಿಜೆಪಿಯಿಂದ ಯುವಕರಾಗಿದ್ದ ಯಡಿಯೂರಪ್ಪ ಸ್ಪರ್ಧಿಸಿದರು. ಅನೇಕ ಹೋರಾಟಗಳ ಮೂಲಕ ಜನ ಮನ್ನಣೆ ಗಳಿಸಿದ್ದ ಯಡಿಯೂರಪ್ಪ ವಿರುದ್ಧ ಸಚಿವರಾಗಿದ್ದ ಇದೇ ಕೆ.ವೆಂಕಟಪ್ಪ ಅವರು ಸುಮಾರು 22 ಸಾವಿರ ಮತಗಳ ಅಂತರದಿಂದ ಸೋತರು.
ನಂತರ ಯಡಿಯೂರಪ್ಪ ಕಾರುಬಾರು. 1985, 1989, 1994 ರಲ್ಲಿ ಗೆಲುವು ಸಾಧಿಸಿದರು. ಆದರೆ 1999 ರಲ್ಲಿ ಜಿಲ್ಲೆಯಲ್ಲಿ ಬಂಗಾರಪ್ಪ ಹವಾ ಎದ್ದಿತ್ತು. ಆಗ ಬಂಗಾರಪ್ಪ ಅವರು ಸಾದರ ಲಿಂಗಾಯತ ಅಭ್ಯರ್ಥಿಯಾದ ಮಹಾಲಿಂಗಪ್ಪ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿಸಿದರು. ಆ ಬಾರಿ 7 ಸಾವಿರ ಮತಗಳ ಅಂತರದಿಂದ ಮೊದಲ ಬಾರಿಗೆ ಯಡಿಯೂರಪ್ಪ ಸೋತರು. ಅದು ಅವರ ಪ್ರಥಮ ಸೋಲು. ಈ ಕ್ಷಣದವರೆಗೂ ಅದೇ ಅವರ ಕೊನೆಯ ಸೋಲೂ ಹೌದು. 2004 , 2008, 2013ರಲ್ಲಿ ಇಲ್ಲಿ ಯಡಿಯೂರಪ್ಪ ಅಭೂತಪೂರ್ವ ಗೆಲುವು ಸಾಧಿಸಿದರು.
ಮೋದಿ ಸರಕಾರದ ಜನಪರ ಯೋಜನೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳು ನಮಗೆ ಶ್ರೀರಕ್ಷೆಯಾಗಲಿವೆ. ಜನರ ನಂಬಿಕೆ ಹುಸಿಗೊಳಿಸಲ್ಲ. – ಯಡಿಯೂರಪ್ಪ ಈ ಚುನಾವಣೆ ಒಬ್ಬ ಬಡವ ಮತ್ತು ಶ್ರೀಮಂತನ ಮಧ್ಯೆ ನಡೆಯುತ್ತಿರುವ ಸಮರ. ಈ ಸಮರದಲ್ಲಿ ಜನರು ನನ್ನಂತಹ ಬಡವನನ್ನು ಗೆಲ್ಲಿಸುವುದರ ಮೂಲಕ ಸಂಪತ್ತಿಗೆ ಸವಾಲ್ ಹಾಕಲಿದ್ದಾರೆ. ನಾನು ದುರ್ಬಲ ಅಭ್ಯರ್ಥಿ ಅಲ್ಲ.
– ಜಿ.ಬಿ. ಮಾಲತೇಶ್ 5 ವರ್ಷಗಳಿಂದ ಕ್ಷೇತ್ರದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಆಡಳಿತವನ್ನು ಜನತೆ ನೋಡಿದ್ದಾರೆ. ಈ ಬಾರಿ ಜೆಡಿಎಸ್ ಗೆ ಅವಕಾಶ ಮಾಡಿಕೊಡಲಿದ್ದಾರೆ.
– ಎಚ್.ಟಿ. ಬಳಿಗಾರ್ – ಗೋಪಾಲ್ ಯಡಗೆರೆ