Advertisement

ಮಾರುತಿಯಿಂದ ಬಿಎಸ್‌-4 ಕಾರು ಉತ್ಪಾದನೆ ಸ್ಥಗಿತ

06:50 AM Dec 20, 2018 | |

ನವದೆಹಲಿ: ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ 2019ರ ಡಿಸೆಂಬರ್‌ನಲ್ಲಿ ಬಿಎಸ್‌-4 ಮಾದರಿ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಲಿದೆ. 2020ರ ಜ.1ರಿಂದ ಕೇಂದ್ರ ಸರ್ಕಾರದ ಸೂಚನೆಯಂತೆ ಬಿಎಸ್‌-6 ಮಾದರಿ ಪರಿಸರ ಸಂರಕ್ಷಣಾ ವ್ಯವಸ್ಥೆ ಇರುವ ಕಾರುಗಳನ್ನು ಉತ್ಪಾದಿಸಲಿದೆ. ಸಂಸ್ಥೆಯ ಅಧ್ಯಕ್ಷ ಆರ್‌.ಸಿ.ಭಾರ್ಗವ ಬುಧವಾರ ಈ ಮಾಹಿತಿ ನೀಡಿದ್ದಾರೆ. 

Advertisement

ಬಿಎಸ್‌-6 ಪರಿಸರ ನಿಯಮಗಳನ್ನು ಹೊಂದಿರುವ ಡೀಸೆಲ್‌ ಕಾರುಗಳ ದರ ಪೆಟ್ರೋಲ್‌ ಕಾರುಗಳಿಗಿಂತ ಹೆಚ್ಚಾಗಲಿದೆ. ಹೀಗಾಗಿ ಅವುಗಳ ಮಾರಾಟ ಕುಗ್ಗುವ ಸಾಧ್ಯತೆ ಎಂದು ಹೇಳಿದ್ದಾರೆ. 2019ರ ಡಿಸೆಂಬರ್‌ ಬಳಿಕ ಬಿಎಸ್‌-4 ಮಾದರಿ ಕಾರುಗಳ ಉತ್ಪಾದನೆ ಮುಂದುವರಿಯಲಿದ್ದರೂ, ಅದು ನಿಯಮಿತವಾಗಿರಲಿದೆ ಎಂದಿದ್ದಾರೆ. ಇದೇ ವೇಳೆ ಮುಂದಿನ ವರ್ಷ 2 ಹೊಸ ಮಾದರಿ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಅವು ಬಿಎಸ್‌-6 ಪರಿಸರ ನಿಯಮಗಳಿಗೆ ಅನ್ವಯವಾಗಿರಲಿವೆ.
 

Advertisement

Udayavani is now on Telegram. Click here to join our channel and stay updated with the latest news.

Next