Advertisement

ಕ್ರೂರ ಕೃತ್ಯ:ಪುಣೆಯಲ್ಲಿ ಬೀದಿ ನಾಯಿಗಳನ್ನು ಜೀವಂತ ಸುಟ್ಟರು!

09:34 AM Oct 05, 2017 | Team Udayavani |

ಪುಣೆ : ಇಲ್ಲಿ ನಡೆದ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಕೃತ್ಯವೊಂದರಲ್ಲಿ ಬೀದಿ ನಾಯಿಗಳ ಮಾರಣ ಹೋಮ ಮಾಡಲಾಗಿದ್ದು, ನಾಲ್ಕು ಬೀದಿನಾಯಿಗಳನ್ನು ಒಟ್ಟಾಗಿ ಸಜೀವವಾಗಿ ದಹಿಸಲಾಗಿದೆ.

Advertisement

ಎನ್‌ಜಿಓ ಸಂಸ್ಥೆಯೊಂದು ದುಷ್ಕೃತ್ಯದ ಬಗ್ಗೆ ಹೋರಾಟಕ್ಕಿಳಿದಿದ್ದು  ಇದುವರೆಗೆ 21 ಬೀದಿನಾಯಿಗಳ ಶವಗಳು ಪತ್ತೆಯಾಗಿದ್ದು, ಕೆಲವು ಪೊದೆಗಳಲ್ಲಿ ಮೂಳೆಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾಲ್ಕು ಬೀದಿ ನಾಯಿಗಳನ್ನು ಒಟ್ಟಾಗಿ ಕಟ್ಟಿ 500 ಮೀಟರ್‌ನಷ್ಟು ನಿರ್ದಯವಾಗಿ ಎಳೆದೊಯ್ದು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲ್ಲಲಾಗಿದ್ದು, 16 ನಾಯಿಗಳಿಗೆ ವಿಷಪ್ರಾಶನ ಮಾಡಿಸಿ ಕೊಲ್ಲಲಾಗಿದೆ. 

ನಾಯಿಗಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿದ್ದು ,ವರದಿ ಬಂದ ಬಳಿಕ ಎಫ್ಐಆರ್‌ ದಾಖಲಿಸಿ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next