Advertisement
ಇತ್ತೀಚೆಗೆ ಸುರಿದ ಮಳೆಯಿಂದ ಸೆ.19ರ ಬೆಳಗಿನ ಜಾವ ಸೇತುವೆ ತಡೆಗೋಡೆಯ ಪ್ಯಾನಲ್ ಗಳು ಕಳಚಿ ಬಿದ್ದಿದ್ದವು. ಇದಾಗಿ ಒಂದು ವಾರದ ನಂತರ ಸೇತುವೆ ಇನ್ನೊಂದು ಭಾಗದಲ್ಲಿ ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಪ್ಯಾನಲ್‌ಗಳು ಕಳಚಿ ಬಿದ್ದಿವೆ. ಸುಮಾರು 15ಕ್ಕೂ ಹೆಚ್ಚು ಪ್ಯಾನಲ್ ಹಾಗೂ ಮಣ್ಣು ಕುಸಿದೆ. ಸೇತುವೆ ಎರಡು ಭಾಗದಲ್ಲಿ ತಡೆಗೋಡೆ ಪ್ಯಾನಲ್‌ಗಳು ಕುಸಿದು ಒಳಗಿನ ಮಣ್ಣು ಹಾಗೂ ಜಲ್ಲಿ ಕಲ್ಲುಗಳು ಕೂಡ ರಸ್ತೆಯಲ್ಲಿ ಬಿದ್ದಿವೆ. ಇದರಿಂದ ಅಲ್ಲಿನ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ಜನರು ಆತಂಕದಲ್ಲಿ ಓಡಾಡುವಂತಾಗಿದೆ.
Related Articles
Advertisement
ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ತಡೆಗೋಡೆ ಪ್ಯಾನಲ್‌ಗಳು ಕುಸಿಯುತ್ತಿರುವ ಕುರಿತು ಶಾಸಕ ಅರವಿಂದ ಬೆಲ್ಲದ ಅವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪತ್ರದ ಮೂಲಕ ಎಚ್ಚರಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದ ದೂರಿನಲ್ಲಿ ಕೂಡ ಮುನ್ನೆಚ್ಚರಿಕೆ ಕ್ರಮ ಹಾಗೂ ಕೂಡಲೇ ದುರಸ್ತಿ ಕೈಗೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮ ಗೊಂಡಿಲ್ಲ. ಇನ್ನೂ ಹಲವು ಕಡೆಗಳಲ್ಲಿ ಪ್ಯಾನಲ್‌ಗಳು ಕುಸಿಯುವ ಸಾಧ್ಯತೆಗಳಿವೆ. ಹೀಗಾಗಿ ಸೇತುವೆಯುದ್ದಕ್ಕೂ ಕೆಳ ಭಾಗದಲ್ಲಿ ಜನ ಹಾಗೂ ಜಾನುವಾರುಗಳು ಸಂಚಾರ ನಿರ್ಬಂಧಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ.
ಬಾಗಿರುವ ಪ್ಯಾನಲ್‌ಗಳೆಲ್ಲವೂ ಕಳಚಿ ಬಿದ್ದರೆ ಇಡೀ ರಸ್ತೆ ಕೊಚ್ಚಿಕೊಂಡು ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಇದೇ ಮಾರ್ಗವಾಗಿ ತಡಸಿನಕೊಪ್ಪ, ಜೋಗ ಯಲ್ಲಾಪುರ, ಯೇರಿಕೊಪ್ಪ ಬೈಪಾಸ್ ಗೆ ಜನರು ಸಂಚರಿಸುತ್ತಾರೆ. ನಿತ್ಯ ಸುಮಾರು ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಓಡಾಡುತ್ತವೆ. ಇದೀಗ ಒಂದು ಸೇತುವೆ ಎರಡು ಸಂಪರ್ಕಿಸುವ ರಸ್ತೆಯಾಗಿದೆ. ನಿತ್ಯ ಕನಿಷ್ಟ 1000 ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಆದರೆ ಬಿದ್ದಿರುವ ಪ್ಯಾನಲ್ ಅಕ್ಕಪಕ್ಕದಲ್ಲಿ ಕೂಡ ಬೀಳುವ ಸ್ಥಿತಿಯಲ್ಲಿದ್ದು, ರಸ್ತೆಯಲ್ಲಿ ಓಡಾಡುವ ಜನರಲ್ಲಿ ಆತಂಕ ಸೃಷ್ಟಿಸಿದೆ. ಯಾವಾಗ ದುರ್ಘಟನೆ ಸಂಭವಿಸುತ್ತದೆ ಎನ್ನುವ ಭಯದಿಂದ ಓಡಾಡುವಂತಾಗಿದೆ.